ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್ ಕೇಸ್‌ಗೆ ಮೇಜರ್ ಟ್ವಿಸ್ಟ್; ಬಿಎಸ್'ವೈಗೆ ಮತ್ತೊಂದು ಸಂಕಷ್ಟ?

Published : Oct 10, 2017, 09:50 PM ISTUpdated : Apr 11, 2018, 01:02 PM IST
ಈಶ್ವರಪ್ಪ ಪಿಎ ವಿನಯ್  ಕಿಡ್ನಾಪ್ ಕೇಸ್‌ಗೆ ಮೇಜರ್ ಟ್ವಿಸ್ಟ್; ಬಿಎಸ್'ವೈಗೆ ಮತ್ತೊಂದು ಸಂಕಷ್ಟ?

ಸಾರಾಂಶ

ಈಶ್ವರಪ್ಪ ಪಿಎ ವಿನಯ್​ ಕಿಡ್ನಾಪ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಹೈಕಮಾಂಡ್ ಕಪ್ಪ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಯಡಿಯೂರಪ್ಪಗೆ ಈಗ ಮತ್ತೊಂದು ಸಂಕಷ್ಟ ತರುವ ಸಾಧ್ಯತೆ ಇದೆ. ಆ ಒಂದು ವಿಡಿಯೋ ಯಡಿಯೂರಪ್ಪಗೆ ಕಂಟಕ ತರುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರು (ಅ.10):  ಈಶ್ವರಪ್ಪ ಪಿಎ ವಿನಯ್​ ಕಿಡ್ನಾಪ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಹೈಕಮಾಂಡ್ ಕಪ್ಪ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಯಡಿಯೂರಪ್ಪಗೆ ಈಗ ಮತ್ತೊಂದು ಸಂಕಷ್ಟ ತರುವ ಸಾಧ್ಯತೆ ಇದೆ. ಆ ಒಂದು ವಿಡಿಯೋ ಯಡಿಯೂರಪ್ಪಗೆ ಕಂಟಕ ತರುವ ಸಾಧ್ಯತೆ ದಟ್ಟವಾಗಿದೆ.

ಕಳೆದ ಮೇ 21 ರಂದು ಮಹಾಲಕ್ಷ್ಮಿ  ಲೇಔಟ್​ನಲ್ಲಿ  ನಡೆದಿದ್ದ ಈಶ್ವರಪ್ಪ ಪಿಎ ವಿನಯ್​ ಕಿಡ್ನಾಪ್​ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​  ಸಿಕ್ಕಿದೆ. ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿಯಾಗಿರುವ ಯಡಿಯೂರಪ್ಪರ ಬೆಂಗಳೂರು ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲೇ ಕಿಡ್ನಾಪ್​ ಮಾಡಲು ಪ್ಲ್ಯಾನ್​ ಮಾಡಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.  

ಜ.12ರಂದು ಯಡಿಯೂರಪ್ಪ ನಿವಾಸದಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಕಿಡ್ನಾಪ್​ ಪ್ರಕರಣದ ಪ್ರಮುಖ ಆರೋಪಿಗಳಾದ ನಟೋರಿಯಸ್​ ಪ್ರಶಾಂತ್, ರಾಜೇಂದ್ರ ಅರಸ್​, ಅಭಿಷೇಕ್​, ಇಂದ್ರೇಶ್​ ಹಾಗೂ ಉಮಾಕಾಂತ್ ಭಾಗಿಯಾಗಿರುವುದು ಬಟಾ ಬಯಲಾಗಿದೆ. ಅಂದು ಎಲ್ಲರೂ ಕೂಡ ಸಂತೋಷ್ ಜೊತೆ ಸೇರಿ ಕಿಡ್ನಾಪ್ ಗೆ ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಬಗ್ಗೆ  ಆರೋಪಿ ಪ್ರಶಾಂತ್​ ಮಲ್ಲೇಶ್ವರಂ ಎಸಿಪಿ ಬಡಿಗೇರ್​ ನೇತೃತ್ವದ ತಂಡದ ಮುಂದೆ ಈ ಎಲ್ಲಾ ವಿಚಾರಗಳನ್ನ ಬಾಯ್ಬಿಟ್ಟಿದ್ದಾನೆ.

ಮೂಲಗಳ ಪ್ರಕಾರ, ಕಿಡ್ನಾಪ್  ಪ್ಲಾನ್ ವಿಚಾರ ಸ್ವತಃ ಯಡಿಯೂರಪ್ಪಗೂ ತಿಳಿದಿತ್ತು ಎನ್ನಲಾಗುತ್ತಿದೆ. ಇದೇ ಕಾರಣಕ್ಕಾಗಿಯೇ ಯಡಿಯೂರಪ್ಪ ನೋಟಿಸ್ ನೀಡಿದ್ರೂ ಹಾಜರಾಗುತ್ತಿಲ್ಲ ಎಂದು ಮೂಲಗಳು ಹೇಳುತ್ತಿವೆ. ಜೊತೆಗೆ ಸಂತೋಷ್ ಕೂಡ ಪೊಲೀಸರ ವಿಚಾರಣೆ ವೇಳೆ ಮೊಬೈಲ್ ನೀಡದೆ ಜಾರಿ ಕೊಳ್ಳುವ ಯತ್ನ ನಡೆಸುತ್ತಿದ್ದಾನೆ. ಒಟ್ಟಾರೆ ಇಷ್ಟು ದಿನ ಪಿಎಗಳ ನಡುವಿನ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ಪ್ರಕರಣ ಈಗ ದೊಡ್ಡವರ ತಲೆಯ ಮೇಲೆ ಬಿದ್ದಿದೆ. ಪೊಲೀಸರ ತನಿಖೆಯಿಂದಷ್ಟೆ ಸತ್ಯ ಹೊರಬೇಕಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೂಪಾಯಿ ಕುಸಿದರೂ ಪ್ರಗತಿಯತ್ತ ಭಾರತ: ನಿಜಕ್ಕೂ ಏನಾಗುತ್ತಿದೆ?‌
87 ವರ್ಷದ ಪ್ರಸಿದ್ಧ ಪೇಂಟರ್ ಮಗುವಿಗೆ ತಾಯಿಯಾದ 37 ವರ್ಷದ ಪತ್ನಿ, ಉಳಿದ ಮಕ್ಕಳೊಂದಿಗೆ ಬಂಧವೇ ಕಟ್