ಸಿಂಗೂರಿನಲ್ಲಿ ನೀಡಿದ್ದ 997 ಎಕರೆ ಭೂಮಿ ವಾಪಾಸ್ ರೈತರಿಗೆ ಭೂಮಿ ಹಿಂತಿರುಗಿಸುವಂತೆ ಸುಪ್ರೀಂ ಕೋರ್ಟ್ ಟಾಟಾ ಕಂಪೆನಿಗೆ ಸೂಚನೆ ನೀಡಿದೆ.
ಸಿಪಿಎಂ ಸರ್ಕಾರದ ಅವಧಿಯಲ್ಲಿ ಟಾಟಾ ಕಂಪೆನಿಗೆ ನ್ಯಾನೋ ಕಾರು ತಯಾರಿಕ ಘಟಕ ಆರಂಭಕ್ಕೆ ಭೂಮಿಯನ್ನು ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಅಂದಿನಿಂದ ಟಿಎಂಸಿ ಕಾನೂನು ಹೋರಾಟವನ್ನು ಕೈಗೊಂಡಿತ್ತು.
ಕಾನೂನು ಉಲ್ಲಂಘಿಸಿ ಟಾಟಾ ಕಂಪೆನಿಗೆ ಭೂಮಿಯನ್ನು ಮಂಜೂರು ಮಾಡಿದ್ದು ತಪ್ಪು ಎಂದು ಸಿಪಿಎಂ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ತೃಣಮೂಲ ಕಾಂಗ್ರೆಸ್ ಗೆ ಜಯ ಸಿಕ್ಕಂತಾಗಿದೆ.