ಸುಪ್ರಿಂಕೋರ್ಟ್`ನಲ್ಲಿ ಕರ್ನಾಟಕದ ವಾದಕ್ಕೆ ಮನ್ನಣೆ

By internet desk-First Published Oct 4, 2016, 9:26 AM IST
Highlights

ನವದೆಹಲಿ(ಅ.04): ಕೊನೆಗೂ ಸುಪ್ರೀಂಕೋರ್ಟ್`ನಲ್ಲಿ ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಿದೆ. ಕೇಂದ್ರ ಅಧ್ಯಯನ ತಂಡವನ್ನ ಕಳುಹಿಸಿ ವಾಸ್ತವ ಸ್ಥಿತಿ ಬಗ್ಗೆ ಅಧ್ಯಯನ ನಡೆಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನ ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ರಾಜ್ಯಕ್ಕೆ ಕೇಂದ್ರ  ಅಧ್ಯಯನ ತಂಡವನ್ನ ಕಳುಹಿಸಲು ಸೂಚಿಸಿದೆ.

ಇದಕ್ಕೂ ಮುನ್ನ, ತಮಿಳುನಾಡಿಗೆ 6 ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್​ ನೀರು ಬಿಡುತ್ತೇವೆ. ಹಿಂದಿನ ಆದೇಶ ಪಾಲಿಸಿ ನೀರು ಬಿಡುತ್ತೇವೆಂದು ಕರ್ನಾಟಕ ಸುಪ್ರೀಂಕೋರ್ಟ್ಗೆ ತಿಳಿಸಿತ್ತು. ಅ.6ರೊಳಗೆ ಕೋರ್ಟ್​ ಆದೇಶದಂತೆ 36 ಸಾವಿರ ಕ್ಯೂಸೆಕ್​ ನೀರು ಬಿಡುತ್ತೇವೆ. ಈಗಾಗಲೇ 9 ಸಾವಿರ ಕ್ಯೂಸೆಕ್​ ನೀರು ಬಿಟ್ಟಿದ್ದೇವೆ. ಇನ್ನೆರಡು ದಿನಗಳಲ್ಲಿ 12 ಸಾವಿರ ಕ್ಯೂಸೆಕ್​ ನೀರು ಬಿಡುತ್ತೇವೆ ಎಂದು ಸುಪ್ರೀಂಕೋರ್ಟ್​ಗೆ ಕರ್ನಾಟಕ ಸರ್ಕಾರ ಮಾಹಿತಿ ನೀಡಿತ್ತು.

click me!