
ಮುಂಬೈ[ಜೂ.22]: ಜಠರಗರುಳಿನ ಉರಿಯುತದ ಕಾರಣದಿಂದಾಗಿ ಬಾಲಿವುಡ್ ತಾರೆ ಸನ್ನಿ ಲಿಯೋನ್ ಉತ್ತಾರಖಂಡ್'ನ ಉದಂ ಸಿಂಗ್ ನಗರದ ಬ್ರಿಜೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೀವ್ರ ಹೊಟ್ಟೆ ನೋವು ಹಾಗೂ ಸ್ವಲ್ಪ ಮಟ್ಟಿನ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಗುರುವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆಗೊಳಪಡಿಸಿದಾಗ ಜಠರಗರುಳಿನ ಉರಿಯುತ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಕಂಡು ಬಂದಿದೆ.
ಸನ್ನಿಯವರಿಗೆ ಚಿಕಿತ್ಸೆ ನೀಡುತ್ತಿದ್ದು ಯಾವುದೇ ಅಪಾಯವಿಲ್ಲ. ಹೆಚ್ಚು ಪ್ರಯಾಣ ಹಾಗೂ ವಾತಾವರಣ ಬದಲಾವಣೆಯ ಕಾರಣ ವಿಪರೀತ ಆಯಾಸವಾಗಿ ಹೊಟ್ಟೆ ನೋವಿನ ಸಮಸ್ಯೆಯುಂಟಾಗಿದೆ. ಇಂದು ರಾತ್ರಿ ಅಥವಾ ನಾಳೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಬ್ರಜೇಶ್ ಆಸ್ಪತ್ರೆಯ ವೈದ್ಯ ಡಾ. ಮಯಾಂಕ್ ಅಗರ್'ವಾಲ್ ತಿಳಿಸಿದ್ದಾರೆ.
ಉತ್ತರಾಖಂಡ್'ನ ನೈನಿತಾಲ್ ಜಿಲ್ಲೆಯ ರಾಮನಗರ್ ಪಟ್ಟಣದಲ್ಲಿ ಎಂಟಿವಿ ಆಯೋಜಿಸುವ ಸ್ಪ್ಲಿಟ್ಸ್ವಿಲ್ಲಾ 11ನೇ ಆವೃತ್ತಿಯ ರಿಯಾಲಿಟಿ ಕಾರ್ಯಕ್ರಮ ಚಿತ್ರೀಕರಣ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಸಹ ನಿರೂಪಕರಾಗಿದ್ದಾರೆ. ಕಳೆದ ವರ್ಷವೂ ಉತ್ತರಾಖಂಡ್'ನಲ್ಲಿ ಕಾರ್ಯಕ್ರಮದ ಚಿತ್ರೀಕರಣ ನಡೆದಿತ್ತು. ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಭಾವಚಿತ್ರಗಳನ್ನು ಫೇಸ್ಬುಕ್'ನಲ್ಲಿ ಸನ್ನಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.