ಕಾರವಾರದ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಮುಂದಾದ ಸುಧಾಮೂರ್ತಿ

By Web DeskFirst Published Jun 21, 2019, 9:34 AM IST
Highlights

ರಸ್ತೆಯಿಲ್ಲದೇ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗೆ ರಸ್ತೆ ನಿರ್ಮಾಣ ಮಾಡಲು ಇನ್ಫೋಸಿಸ್ ಸುಧಾಮೂರ್ತಿ ಮುಂದಾಗಿದ್ದಾರೆ. 

ಬೆಂಗಳೂರು[ಜೂ.21] :  ಕಾರವಾರ ಜಿಲ್ಲೆಯ ಮೇದಿನಿ ಎಂಬ ಗ್ರಾಮಕ್ಕೆ ರಸ್ತೆ ಇಲ್ಲ ಎನ್ನುವ ವಿಚಾರ ಕನ್ನಡಪ್ರಭ ಪತ್ರಿಕೆ ವರದಿಯಿಂದ ತಿಳಿದಿದೆ. ಹಾಗಾಗಿ ಇನ್ಫೋಸಿಸ್ ಪ್ರತಿಷ್ಠಾನದಿಂದ ಆ ಗ್ರಾಮಕ್ಕೆ ಎಂಟು ಕಿ.ಮೀ. ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿಗಳು ರಸ್ತೆ ನಿರ್ಮಾಣಕ್ಕೆ ಅನುಮತಿ ಕೊಡಿಸಬೇಕು ಎಂದು ಸುಧಾಮೂರ್ತಿ ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಮೇದಿನಿ ಗ್ರಾಮದ ರಸ್ತೆ ವಿಚಾರ ತಮ್ಮ ಗಮನಕ್ಕೂ ಬಂದಿದೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವು ದರಿಂದ ಕೊಂಚ ಸಮಸ್ಯೆಯಾಗಿದೆ ಎಂದರು.

ಈ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಇನ್ಫೋಸಿಸ್ ಪ್ರತಿಷ್ಠಾನದಿಂದಲೇ ರಸ್ತೆ ನಿರ್ಮಿಸುವುದಕ್ಕೆ ಅಗತ್ಯ ಸಹಕಾರ ನೀಡುವು ದಾಗಿ ಭರವಸೆ ನೀಡಿದರು.

click me!