ಸೋನು ಬಳಿಕ ಆಜಾನ್ ವಿರುದ್ಧ ಗಾಯಕಿ ಸುಚಿತ್ರಾ ಆಕ್ರೋಶ

By Suvarna Web DeskFirst Published Jul 25, 2017, 12:54 PM IST
Highlights

ಹಿಂದೂ ಧರ್ಮದ ಪ್ರಕಾರ ಆಜಾನ್ ಮಾಡುವ ವೇಳೆಯು ಬ್ರಾಹ್ಮೀ ಮುಹೂರ್ತವಾಗಿದೆ. ನಿಮಗೆ ಒಳ್ಳೆಯದೇ ಆಯಿತಲ್ಲಾ ಎಂದು ಕೆಲ ಟ್ವೀಟಿಗರು ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಚಿತ್ರಾ, "ನನಗೆ ಅನುಕೂಲವಾದಾಗ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತೇನೆ. ನನಗೆ ಬೇಕಾದಾಗ ಪ್ರಾರ್ಥನೆ ಮಾಡುತ್ತೇನೆ, ರಿಯಾಜ್ ಮಾಡುತ್ತೇನೆ, ಯೋಗ ಮಾಡುತ್ತೇನೆ. ದೇವರ ಪೂಜೆ ಮಾಡಲು ನನಗೆ ಲೌಡ್'ಸ್ಪೀಕರ್'ನ ಅಗತ್ಯವಿಲ್ಲ," ಎಂದು ಹೇಳಿದ್ದಾರೆ.

ಮುಂಬೈ: ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಮೂಲಕ ಮೊಳಗುವ ಆಜಾನ್ ವಿರುದ್ಧ ಖ್ಯಾತ ಗಾಯಕ ಸೋನು ನಿಗಮ್ ಕಿಡಿಕಾರಿದ್ದ ಬೆನ್ನಲ್ಲೇ, ಇಂಥದ್ದೇ ಅಭಿಪ್ರಾಯವನ್ನು ಗಾಯಕಿ ಮತ್ತು ನಟಿ ಸುಚಿತ್ರಾ ಕೃಷ್ಣಮೂರ್ತಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಚಿತ್ರಾ, "ಬೆಳಗಿನ ಜಾವ 4:45ಕ್ಕೆ ಬಂದು ನಿದ್ದೆ ಮಾಡಬೇಕೆಂದುಕೊಂಡರೆ, ಗಟ್ಟಿ ಧ್ವನಿಯಲ್ಲಿ ಕೂಗುವ ಆಜಾನ್‌'ನಿಂದ ಅಡ್ಡಿಯಾಗುತ್ತದೆ. ಈ ರೀತಿಯ ಬಲವಂತದ ಧರ್ಮ ಹೇರಿಕೆ ಅನುಭವಿಸುವ ಬದಲು ಕಿವುಡರಾಗಿದ್ದರೆ ಚೆನ್ನಾಗಿರುತ್ತಿತ್ತು. ನನ್ನ ಸಮಯಕ್ಕೆ ನಾನು ಹಾಸಿಗೆಯಿಂದ ಎದ್ದು ಪ್ರಾರ್ಥನೆ, ಸಂಗೀತ ಮತ್ತು ಯೋಗ ಮಾಡುತ್ತೇನೆ. ನನ್ನ ದೇವರನ್ನು ಅಥವಾ ನನ್ನ ಜವಾಬ್ದಾರಿಗಳನ್ನು ನೆನಪಿಸಲು ಸಾರ್ವಜನಿಕ ಲೌಡ್'ಸ್ಪೀಕರ್ ಅಗತ್ಯವಿಲ್ಲ. ಆಜಾನ್ ಅಥವಾ ಪ್ರಾರ್ಥನೆಗೆ ಯಾರೂ ಅಡ್ಡಿಪಡಿಸುವುದಿಲ್ಲ. ಆದರೆ, ಬೆಳಗಿನ ಜಾವ 5 ಗಂಟೆಗೆ ಎಲ್ಲರನ್ನೂ ಎಬ್ಬಿಸುವುದು ನಾಗರಿಕತೆ ಅಲ್ಲ’ ಎಂದು ಅವರು ತಮ್ಮ ಟ್ವೀಟ್‌'ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ಭಾರತದಲ್ಲಿ ಆಜಾನ್ ಶಬ್ದ ವಿಶ್ವದಲ್ಲೇ ಅತ್ಯಂತ ಜೋರಿ ಧ್ವನಿಯದ್ದು. ಇಸ್ಲಾಮಿಕ್ ರಾಷ್ಟ್ರಗಳಲ್ಲೂ ಇಷ್ಟು ಶಬ್ದ ಬರೋದಿಲ್ಲ ಎಂದು ಸುಚಿತ್ರಾ ಹೇಳಿಕೊಂಡಿದ್ದಾರೆ.

ಅವರ ಈ ಟ್ವೀಟ್'ಗೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿವೆ. ಹಿಂದೂ ಧರ್ಮದ ಪ್ರಕಾರ ಆಜಾನ್ ಮಾಡುವ ವೇಳೆಯು ಬ್ರಾಹ್ಮೀ ಮುಹೂರ್ತವಾಗಿದೆ. ನಿಮಗೆ ಒಳ್ಳೆಯದೇ ಆಯಿತಲ್ಲಾ ಎಂದು ಕೆಲ ಟ್ವೀಟಿಗರು ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಚಿತ್ರಾ, "ನನಗೆ ಅನುಕೂಲವಾದಾಗ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತೇನೆ. ನನಗೆ ಬೇಕಾದಾಗ ಪ್ರಾರ್ಥನೆ ಮಾಡುತ್ತೇನೆ, ರಿಯಾಜ್ ಮಾಡುತ್ತೇನೆ, ಯೋಗ ಮಾಡುತ್ತೇನೆ. ದೇವರ ಪೂಜೆ ಮಾಡಲು ನನಗೆ ಲೌಡ್'ಸ್ಪೀಕರ್'ನ ಅಗತ್ಯವಿಲ್ಲ," ಎಂದು ಹೇಳಿದ್ದಾರೆ.

ಸುವರ್ಣನ್ಯೂಸ್ ಚರ್ಚೆಯಲ್ಲಿ...
ಆಜಾನ್'ಗೆ ವಿರೋಧ ವ್ಯಕ್ತವಾಗುತ್ತಿರುವುದು ಸರಿಯಲ್ಲ. ಅವರವರ ಧರ್ಮಗಳ ಆಚರಣೆ ಪಾಲಿಸಲು ಅನುವು ಮಾಡಿಕೊಡಬೇಕು ಎಂದು ಮುಸ್ಲಿಂ ಮುಖಂಡ ಶಫೀವುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಸುವರ್ಣನ್ಯೂಸ್'ನ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಫೀವುಲ್ಲಾ, ಕೆಲವೇ ಜನರು ಬಿಟ್ಟರೆ ಬೇರಾರೂ ಈ ಆಜಾನ್'ನ್ನು ವಿರೋಧಿಸುತ್ತಿಲ್ಲ. ಚೆನ್ನಾಗಿ ಕುಡಿದು ಲೇಟ್ ನೈಟ್ ಪಾರ್ಟಿ ಮಾಡಿ ತಡವಾಗಿ ಮಲಗುವ ಮಂದಿಗಷ್ಟೇ ತೊಂದರೆಯಾಗುತ್ತಿರಬಹುದು ಎಂದು ವಾದಿಸಿದ್ದಾರೆ. ಆಜಾನ್ ಆಚರಣೆಯೇ ಬೇಡ ಎಂದಾದರೆ, ಬೇರೆ ಧರ್ಮಗಳ ಆಚರಣೆ ವೇಳೆ ಆಗುವ ಶಬ್ದ ಮಾಲಿನ್ಯದ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಶಫೀವುಲ್ಲಾ ಆಗ್ರಹಿಸಿದ್ದಾರೆ.

ಇದೇ ವೇಳೆ, ಚಿಂತಕ ಶರಿಯಾರ್ ಖಾನ್ ಅವರು ಆಜಾನ್'ನ ವೇಳೆ ಆಗುವ ಧ್ವನಿ ವರ್ಧಕದ ಧ್ವನಿಯಿಂದ ಜನರಿಗೆ ತೊಂದರೆ ಆಗಿದ್ದರೆ ಶಬ್ದವನ್ನು ಕಡಿಮೆ ಮಾಡುವ ವ್ಯವಸ್ಥೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಆಜಾನ್ ಆಚರಣೆಯನ್ನೇ ತೆಗೆದುಹಾಕಬೇಕೆನ್ನುವ ಕೆಲವರ ಕೂಗಿಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

epaperkannadaprabha.com

click me!