‘ಮಂದಿರಕ್ಕೆ ಅಡ್ಡಿ ಮಾಡಿದರೆ ಮೋದಿ ಸರ್ಕಾರ ಬೀಳಿಸುತ್ತೇನೆ’!

Published : Dec 08, 2018, 05:18 PM IST
‘ಮಂದಿರಕ್ಕೆ ಅಡ್ಡಿ ಮಾಡಿದರೆ ಮೋದಿ ಸರ್ಕಾರ ಬೀಳಿಸುತ್ತೇನೆ’!

ಸಾರಾಂಶ

ಕೇಂದ್ರ, ಯುಪಿ ಸರ್ಕಾರಗಳ ಮೇಲೆ ಗುಡುಗಿದ ಸುಬ್ರಮಣಿಯನ್ ಸ್ವಾಮಿ| ರಾಮ ಮಂದಿರಕ್ಕೆ ಅಡ್ಡಿ ಮಾಡಿದರೆ ಸರ್ಕಾರ ಬೀಳಿಸುವ ಬೆದರಿಕೆ| ಬಿಜೆಪಿ ನಾಯಕನಿಂದಲೇ ಕೇಂದ್ರ ಸರ್ಕಾರ ಬೀಳಿಸುವ ಬೆದರಿಕೆ| ನ್ಯಾಯಾಲಯದಲ್ಲಿ ವಾದ ಗೆಲ್ಲುವ ಭರವಸೆ ವ್ಯಕ್ತಪಡಿಸಿದ ಸ್ವಾಮಿ| ಮಂದಿರ ನಿರ್ಮಾಣಕ್ಕೆ ಯುಪಿ, ಕೇಂದ್ರ ಸರ್ಕಾರಗಳೇ ನಮಗೆ ಶತ್ರುಗಳು| ರಾಮ ಮಂದಿರ ಕಟ್ಟಲು ಮುಸ್ಲಿಮರ ವಿರೋಧವಿಲ್ಲ ಎಂದ ಸ್ವಾಮಿ

ನವದೆಹಲಿ(ಡಿ.08): ಒಂದು ವೇಳೆ ಕೇಂದ್ರ ಸರ್ಕಾರ ಅಥವಾ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸಿದ್ದಾದರೆ ಸರ್ಕಾರವನ್ನು ಉರುಳಿಸುವುದಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ರಾಮಮಂದಿರ ಸಂಬಂಧ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ಜನವರಿಗೆ ಕಾಯ್ದಿರಿಸಿದೆ. ನಾವು ನ್ಯಾಯಾಲಯದಲ್ಲಿ ಕೇವಲ ಎರಡು ವಾರಗಳಲ್ಲಿ ಈ ಹೋರಾಟವನ್ನು ಗೆಲ್ಲಲಿದ್ದೇವೆ ಎಂದು ಸುಬ್ರಮಣಿಯನ್ ಭರವಸೆ ವ್ಯಕ್ತಪಡಿಸಿದ್ದಾರೆ. 

ಸದ್ಯ ನಮ್ಮ ಶತ್ರು ಸುಪ್ರೀಂ ಕೋರ್ಟ್ ಅಲ್ಲ ಬದಲಿಗೆ ಉತ್ತರಪ್ರದೇಶ ಮತ್ತು ಕೇಂದ್ರ ಸರ್ಕಾರಗಳೇ ನಮಮ ಶತ್ರುಗಳು. ಹೀಗಾಗಿ ಒಂದು ವೇಳೆ ರಾಮ ಮಂದಿರಕ್ಕೆ ಅಡ್ಡಿಯುಂಟು ಮಾಡಿದರೆ, ಈ ಎರಡು ಸರ್ಕಾರಗಳನ್ನು ನಾನೇ ಖುದ್ದಾಗಿ ಬೀಳಿಸುತ್ತೇನೆ ಎಂದು ಸ್ವಾಮಿ ಗುಡುಗಿದ್ದಾರೆ.

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಮುಸ್ಲಿಮರಿಗೆ ಯಾವುದೇ  ಆಕ್ಷೇಪಗಳಿಲ್ಲ ಎಂದು ನಾನು ಬಲ್ಲೆ ಎಂದಿರುವ ಸ್ವಾಮಿ, ನಾನು ವೈಯಕ್ತಿಕವಾಗಿ ಮುಸ್ಲಿಮರನ್ನು ಭೇಟಿಯಾಗಿದ್ದು ಅವರೇ ನನಗೆ ಈ ಮಾತುಗಳನ್ನು ಹೇಳಿದ್ದಾರೆ’ ಎಂದು ಸ್ವಾಮಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುಟಿನ್‌ ಮನೆ ಮೇಲೆ ಉಕ್ರೇನ್‌ ದಾಳಿ ಯತ್ನ?
ಭಾರತೀಯರ ವರ್ಕ್‌ ಪರ್ಮಿಟ್‌ ರದ್ದು ಮಾಡಿ: ಹದಿ ಬೆಂಬಲಿಗರ ಆಗ್ರಹ