ಪ್ರಿಯಾಂಕ ಅವರಿಗೆ ಜನರನ್ನು ಥಳಿಸುವ ಕಾಯಿಲೆ ಇದೆ: ಸುಬ್ರಮಣಿಯನ್ ಸ್ವಾಮಿ!

Published : Jan 27, 2019, 02:13 PM IST
ಪ್ರಿಯಾಂಕ ಅವರಿಗೆ ಜನರನ್ನು ಥಳಿಸುವ ಕಾಯಿಲೆ ಇದೆ: ಸುಬ್ರಮಣಿಯನ್ ಸ್ವಾಮಿ!

ಸಾರಾಂಶ

ಸುಬ್ರಮಣಿಯನ್ ಸ್ವಾಮಿ ಅವರಿಂದ ವಿವಾದಾತ್ಮಕ ಹೇಳಿಕೆ| ಪ್ರಿಯಾಂಕ ಗಾಂಧಿ ಅವರಿಗೆ ಮಾನಸಿಕ ಸಮಸ್ಯೆ ಇದೆ ಎಂದ ಸ್ವಾಮಿ| ‘ಬೈಪೋಲಾರ್ ಸಮಸ್ಯೆಯಿಂದ ಬಳಲುತ್ತಿರುವ ಪ್ರಿಯಾಂಕ ಜನರನ್ನು ಥಳಿಸುತ್ತಾರೆ’|‘ಮಾನಸಿಕ ಕಾಯಿಲೆಯೇ ಆಕೆಯ ಸಾವರ್ವಜನಿಕ ಜೀವನಕ್ಕೆ ಮುಳುವಾಗಲಿದೆ’| ತೀವ್ರ ವಿವಾದ ಸೃಷ್ಟಿಸಿದ ಸುಬ್ರಮಣಿಯನ್ ಸ್ವಾಮಿ ಹೇಳಿಕೆ

ನವದೆಹಲಿ(ಜ.27): ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಸಕ್ರೀಯ ರಾಜಕಾರಣಕ್ಕೆ ಕರೆತಂದು ಕಾಂಗ್ರೆಸ್ ಸಂಭ್ರಮಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಈ ಪಡಿಯಚ್ಚು ತನಗೆ ಮತ ತಂದು ಕೊಡಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್ ಪಕ್ಷದ್ದು.

ಅಲ್ಲದೇ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಪ್ರಿಯಾಂಕ ನೆರವಾಗಬಲ್ಲರು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಆದರೆ ಪ್ರಿಯಾಂಕ ಆಗಮನದಿಂದ ಬಿಜೆಪಿಗೆ ಭಯವೇನೂ ಆಗಿಲ್ಲ ಎಂಬುದಕ್ಕೆ ಸುಬ್ರಮಣಿಯನ್ ಸ್ವಾಮಿ ಅವರ ಈ ಹೇಳಿಕೆಯೇ ಸಾಕ್ಷಿ.

ಪೂರ್ವ ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿ ನೇಮಕವಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಬೈಪೋಲಾರ್ ಮಾನಸಿಕ ಸಮಸ್ಯೆ ಇದ್ದು, ಅವರು ಜನರನ್ನು ಥಳಿಸುತ್ತಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. 

‘ಪ್ರಿಯಾಂಕಾ ಮಾನಸಿಕ ಸಮಸ್ಯೆ - ಬೈಪೋಲಾರ್ ನಿಂದ ಬಳಲುತ್ತಿದ್ದಾರೆ. ಅವರು ಜನರನ್ನು ಥಳಿಸುತ್ತಾರೆ. ಅವರ ಕಾಯಿಲೆಯೇ ಅವರ ಸಾರ್ವಜನಿಕ ಜೀವನಕ್ಕೆ ಮುಳುವಾಗಲಿದೆ.  ಆಕೆ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದು ಸ್ವಾಮಿ ಹೇಳಿದ್ದಾರೆ.

ಇನ್ನು ಸ್ವಾಮಿ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ್ದು, ಬಿಜೆಪಿಯ ಬುದ್ದಿಜೀವಿ ಎಂದೇ ಗುರುತಿಸಲ್ಪಡುವ ಸ್ವಾಮಿ ಅವರಿಂದ ಇಂತಹ ಕೀಳು ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಕಾಂಗ್ರೆಸ್ ಹರಿಹಾಯ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ