
ಅಮರಾವತಿ(ಸೆ.13): ಅಮರಾವತಿಯಲ್ಲಿ ಮರ್ಯಾದಾ ಹತ್ಯೆ ನಡೆದ ಘಟನೆಯೊಂದು ಬೆಳಕಿಗೆ ಬಂದಿದ್ದು, ಪೊಲೀಸ್ ಅಧಿಕಾರಿಯೊಬ್ಬರನ್ನು ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಉಪ ನಿರೀಕ್ಷಕ ಸೇರಿದಂತೆ 5 ಮಂದಿಯನ್ನು ಬಂಧಿಸಲಾಗಿದೆ. ಮೂಲಗಳ ಪ್ರಕಾರ ಪೊಲೀಸ್ ಅಧಿಕಾರಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಅಮರಾವತಿಯ ಸಚಿನ್ ಸಿಮೋಲಿಯಾ ಇಲ್ಲಿನ ವಶೀಮ್ ಜಿಲ್ಲೆಯ ಉಪ ನಿರೀಕ್ಷಕ ತುಕಾರಾಮ್ ಠೋಕೆ ಎಂಬವರ ಮಗಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿಯ ಮನೆಯವರಿಗೆ ಈ ವಿಚಾರದಿಂದ ಅಸಮಾಧಾನವಿತ್ತು. ಮನೆಯವರ ವಿರೋಧದ ನಡುವೆಯೂ ಇವರಿಬ್ಬರು 2016ರ ಏಪ್ರಿಲ್ 1 ರಂದು ವಿವಾಹವಾಗಿದ್ದರು.
ಇದರಿಂದ ಕುಪಿತಗೊಂಡ ಯುವತಿಯ ತಂದೆ ಏಪ್ರಿಲ್ 25ರಂದು ಉಪಾಯದಿಂದ ಸಚಿನ್'ನನ್ನು ತನ್ನ ಮನೆಗೆ ಕರೆಸಿದ್ದು, ಬಳಿಕ ಮಗಳನ್ನು ಮನೆಯಲ್ಲೇ ನಿಲ್ಲಿಸಿ ಹುಡುಗನನ್ನು ಸುತ್ತಾಡಿಕೊಂಡು ಬರುವ ನೆಪದಲ್ಲಿ ಕಾಡಿಗೆ ಕರೆದೊಯ್ದಿದ್ದ. ಅಲ್ಲಿ ತನ್ನ ಮಗ ಹಾಗೂ ಸೋದರಳಿಯನೊಂದಿಗೆ ಸೇರಿ ಹತ್ಯೆಗೈದು, ಸಾಕ್ಷಿ ನಾಶಪಡಿಸಲು ಶವವನ್ನು ಸುಟ್ಟು ಹಾಕಿದ್ದರು. ಸಾಲದೆಂಬಂತೆ ತನಿಖೆಯ ದಿಕ್ಕು ತಪ್ಪಿಸಲು ಸುಟ್ಟ ಶವಕ್ಕೆ ಮಂಗಳಸೂತ್ರವನ್ನೂ ತೊಡಿಸಿದ್ದರು. ಆದರೆ ಕೊನೆಗೂ ಇವರ ಬಣ್ಣ ಬಯಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.