
ಬೆಂಗಳೂರು(ನ.08): ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಇಬ್ಬರು ಉದಯೋನ್ಮುಖ ಸ್ಟಂಟ್ ಕಲಾವಿದರಾದ ುದಯ್ ಮತ್ತು ಅನಿಲ್ ಅಸುನೀಗಿದ್ಧಾರೆ. ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇಬ್ಬರನ್ನ ಬಲಿ ಪಡೆದ ಸ್ಟಂಟ್ ಮಾಸ್ಟರ್ ರವಿವರ್ಮ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಂದಹಾಗೆ, ರವಿವರ್ಮ ಕಾರ್ಯವೈಖರಿ ಹೇಗಿತ್ತು ಎಂಬ ಬಗ್ಗೆ ನಿರ್ಮಾಪಕರು ಬಿಚ್ಚಿಟ್ಟ ಕಹಿ ಸತ್ಯ ಇಲ್ಲಿದೆ.
CLICK HERE.. (ವಿಡಿಯೋ) 25 ವರ್ಷಗಳ ಕಾಲ ನಿತ್ಯ ಗುಹೆಗೆ ತೆರಳುತ್ತಿದ್ದ ವ್ಯಕ್ತಿ ಸೃಷ್ಟಿಸಿದ್ದ ಅದ್ಬುತ ಲೋಕ ಎಂಥದ್ದು ಗೊತ್ತಾ..?
- ರವಿವರ್ಮ ಕಾರ್ಯ ವೈಖರಿ ಬಗ್ಗೆ ನಿರ್ಮಾಪಕರ ಅಸಮಾಧಾನ
- ರವಿವರ್ಮ ಸಾಹಸ ದೃಶ್ಯದ ಬಗ್ಗೆ ನಿರ್ಮಾಪಕ ದಯಾಳ್ ಪದ್ಮನಾಭನ್ ಕಿಡಿ
- ‘ರವಿವರ್ಮ ಅಪಾಯಕಾರಿ ಸಾಹಸ ದೃಶ್ಯ ನಿರ್ದೇಶಿಸುತ್ತಿದ್ದರು’
- ‘ಪೂರ್ವ ತಯಾರಿ, ಮುನ್ನೆಚ್ಚರಿಕೆ ಕ್ರಮ ಇಲ್ಲದೇ ಸ್ಟಂಟ್ಸ್ ಮಾಡಿಸುತ್ತಿದ್ದರು’
- ‘ಸ್ಟಂಟ್ ಮಾಡುವ ಯುವಕರಿಗೂ ಯಾವುದೇ ರೀತಿಯ ಮಾಹಿತಿ ಕೊಡುತ್ತಿರಲಿಲ್ಲ’
- ‘ಸೆಟ್ಗೆ ಬಂದಾಗ ಸಾಹಸ ದೃಶ್ಯದ ವಿವರಣೆ ಕೊಡುತ್ತಿದ್ದರು’
- ‘ಸ್ಟಂಟ್ ಮಾಡುವ ಹುಡುಗರ ಸುರಕ್ಷತೆ ಬಗ್ಗೆ ರವವರ್ಮ ಕಾಳಜಿ ವಹಿಸುತ್ತಿರಲಿಲ್ಲ’
- ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ರವಿವರ್ಮ ಕಾರ್ಯವೈಖರಿಗೆ ಬಿಚ್ಚಿಟ್ಟ ದಯಾಳ್
ಇಷ್ಟೇ ಅಲ್ಲ, ುದಯ್ ಮತ್ತು ಅನಿಲ್ ಸಾವಿಗೀಡಾದ ಬಳಿಕ ಸ್ಟಂಟ್ ಮಾಸ್ಟರ್ ರವಿವರ್ಮ ನಾಪತ್ತೆಯಾಗಿದ್ದಾರೆ. ಘಟನೆ ಬಳಿಕ ರವಿವರ್ಮ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ರಾಘವ್ ಉದಯ್, ಅನಿಲ್ ಸಾವಿನ ಬಳಿಕ ರವಿವರ್ಮ ಪತ್ತೆ ಇಲ್ಲ. ಶವಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿರುವ ಜಲಾಶಯ ಬಳಿಯೂ ರವಿವರ್ಮ ಇಲ್ಲ. ಇಷ್ಟಾದರೂ, ಘಟನೆ ಬಗ್ಗೆ ಈವರೆಗೂ ರವಿವರ್ಮ ಬಾಯ್ಬಿಟ್ಟಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.