ನೀಟ್ ಕೌನ್ಸೆ ಲಿಂಗ್ ವೇಳೆ ವಿದ್ಯಾರ್ಥಿಗಳ ಪರದಾಟ: ತಡರಾತ್ರಿವರೆಗೂ ಕೌನ್ಸೆಲಿಂಗ್! ನೀರಿಲ್ಲ, ಶೌಚಾಲಯವೂ ಇಲ್ಲ

Published : Jul 19, 2017, 09:19 AM ISTUpdated : Apr 11, 2018, 12:59 PM IST
ನೀಟ್ ಕೌನ್ಸೆ ಲಿಂಗ್ ವೇಳೆ ವಿದ್ಯಾರ್ಥಿಗಳ ಪರದಾಟ: ತಡರಾತ್ರಿವರೆಗೂ ಕೌನ್ಸೆಲಿಂಗ್! ನೀರಿಲ್ಲ, ಶೌಚಾಲಯವೂ ಇಲ್ಲ

ಸಾರಾಂಶ

ರಾಜ್ಯ ಕೋಟಾದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿ ಸಿದಂತೆ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಲ್ಲೇಶ್ವರದ ಕೇಂದ್ರ ಕಚೇರಿಯಲ್ಲಿ ನಡೆಸುತ್ತಿರುವ ನೀಟ್ ಅಭ್ಯರ್ಥಿಗಳ ದಾಖಲೆ ಪರಿಶೀಲನಾ ಪ್ರಕ್ರಿಯೆ ಅವ್ಯವಸ್ಥೆ ಆಗರವಾಗಿ ಪರಿಣಮಿಸಿದೆ. ಒಂದೆಡೆ ದಾಖಲೆ ಪರಿಶೀಲನಾ ಪ್ರಕ್ರಿಯೆ ನಿಗದಿಪಡಿಸಿದ ಸಮಯಕ್ಕೆ ನಡೆಯದೆ ನಿತ್ಯವೂ ತಡವಾಗುತ್ತಿದ್ದು, ಇದರಿಂದ ಅಭ್ಯರ್ಥಿಗಳು ತಡರಾತ್ರಿವರೆಗೂ ಪ್ರಾಧಿಕಾರದ ಆವರಣದಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಮತ್ತೊಂದೆಡೆ ಪ್ರಾಧಿಕಾರದ ಆವರಣದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೆ ಅಭ್ಯರ್ಥಿಗಳು ಪರಿತಪಿಸುವಂತಾಗಿದೆ.

ಬೆಂಗಳೂರು(ಜು.19): ರಾಜ್ಯ ಕೋಟಾದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿ ಸಿದಂತೆ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಲ್ಲೇಶ್ವರದ ಕೇಂದ್ರ ಕಚೇರಿಯಲ್ಲಿ ನಡೆಸುತ್ತಿರುವ ನೀಟ್ ಅಭ್ಯರ್ಥಿಗಳ ದಾಖಲೆ ಪರಿಶೀಲನಾ ಪ್ರಕ್ರಿಯೆ ಅವ್ಯವಸ್ಥೆ ಆಗರವಾಗಿ ಪರಿಣಮಿಸಿದೆ. ಒಂದೆಡೆ ದಾಖಲೆ ಪರಿಶೀಲನಾ ಪ್ರಕ್ರಿಯೆ ನಿಗದಿಪಡಿಸಿದ ಸಮಯಕ್ಕೆ ನಡೆಯದೆ ನಿತ್ಯವೂ ತಡವಾಗುತ್ತಿದ್ದು, ಇದರಿಂದ ಅಭ್ಯರ್ಥಿಗಳು ತಡರಾತ್ರಿವರೆಗೂ ಪ್ರಾಧಿಕಾರದ ಆವರಣದಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಮತ್ತೊಂದೆಡೆ ಪ್ರಾಧಿಕಾರದ ಆವರಣದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೆ ಅಭ್ಯರ್ಥಿಗಳು ಪರಿತಪಿಸುವಂತಾಗಿದೆ.

ಬೆಳಗ್ಗೆ ದಾಖಲೆ ಪರಿಶೀಲನೆಗೆ ಆಗಮಿಸಬೇಕೆಂದು ಸೂಚನೆ ನೀಡಿರುವ ಅಭ್ಯರ್ಥಗಳಿಗೆ ಮಧ್ಯಾಹ್ನ, ಮಧ್ಯಾಹ್ನ ಸಮಯ ನಿಗದಿಯಾಗಿ ರುವ ಅಭ್ಯರ್ಥಿಗಳಿಗೆ ಸಂಜೆಯಾದರೂ ದಾಖಲೆ ಪರಿಶೀಲನೆ ಮುಗಿಯುತ್ತಿಲ್ಲ. ಇನ್ನು ಸಂಜೆ ಸಮಯ ಇರುವವರಿಗೆ ತಡರಾತ್ರಿ ವರೆಗೂ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಆದಷ್ಟು ಬೇಗ ದಾಖಲೆ ಪರಿಶೀಲನೆ ಮುಗಿಸಬೇಕೆಂಬ ಕಾರಣಕ್ಕೆ ಅಧಿಕಾರಿಗಳು ನಿತ್ಯ ಅಗತ್ಯಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಆಹ್ವಾನಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ. ಬರಹೇಳಿದ್ದು 3.30ಕ್ಕೆ, ರಾತ್ರಿ 10.30 ಆದರೂ ಕರೆದಿಲ್ಲ: ಈ ಸಂಬಂಧ ‘ಕನ್ನಡಪ್ರಭದೊಂದಿಗೆ ಮಾತನಾಡಿದ ಹೊರರಾಜ್ಯಗಳಿಂದ ಆಗಮಿಸಿರುವ ಹಲವು ಅಭ್ಯರ್ಥಿಗಳು ತಮಗೆ ನೀಡಿದ್ದ ಸಮಯವೆಷ್ಟು, ದಾಖಲೆ ಪರಿಶೀಲನೆ ಮುಗಿದಿದ್ದೆಷ್ಟು ಗಂಟೆಗೆ ಎಂದು ಮಾತನಾಡಿದ್ದಾರೆ.

ಆಂಧ್ರಪ್ರದೇಶದಿಂದ ಆಗಮಿಸಿದ್ದ ಎಂಬಿಬಿಎಸ್ ಸೀಟು ಆಕಾಂಕ್ಷಿ ಮಲ್ಲೇಶ್ವರಿ ರೆಡ್ಡಿ, ನನಗೆ ಮಧ್ಯಾಹ್ನ 3.30ಕ್ಕೆ ದಾಖಲೆ ಪರಿಶೀಲನೆಗೆ ಆಗಮಿಸಿ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಅದರಂತೆ ಆಗಮಿಸಿ ಮಧ್ಯಾಹ್ನದಿಂದ ಕಾಯುತ್ತಿದ್ದೇನೆ. ರಾತ್ರಿ 10.30 ಆದರೂ ಇನ್ನು ನನ್ನ ದಾಖಲೆ ಪರಿಶೀಲನೆಗೆ ಕರೆದಿಲ್ಲ. ಊರಿಗೆ ವಾಪಸ್ ಹೋಗಲು ಸಂಜೆ 7.30ಕ್ಕೆ ಕಾಯ್ದಿರಿಸಿದ್ದ ಟಿಕೆಟ್‌ಅನ್ನು ರದ್ದುಪಡಿಸಿ ರಾತ್ರಿಗೆ ನಿಗದಿಪಡಿಸಿ ರಾತ್ರಿ 11ಕ್ಕೆ ನಿಗದಿಪಡಿಸಿದ್ದೆ. ಈಗ ಅದನ್ನೂ ರದ್ದುಪಡಿಸಬೇಕಾದ ಸನ್ನಿವೇಶ ಎದುರಾಗಿದೆ ಎಂದು ಅಳಲು ತೋಡಿಕೊಂಡರು. ಛತ್ತಿಸ್‌ಗಢನ ನಿಶಾಂತ್ ಅಗರವಾಲ್, ತಮಗೆ ಮಂಗಳವಾರ ಸಂಜೆ 4.30ಕ್ಕೆ ಸಮಯ ನೀಡಲಾಗಿತ್ತು, ರಾತ್ರಿ 10.30 ಆದರೂ ನನ್ನ ರ್ಯಾಂಕಿಂಗ್ ಬಂದಿಲ್ಲ. ಇನ್ನೂ ಒಂದು ಗಂಟೆಗೂ ಹೆಚ್ಚು ಸಮಯ ಆಗಬಹುದು ಎಂದು ಅಧಿಕಾರಿಗಳೂ ಹೇಳುತ್ತಿದ್ದಾರೆ. ಈಗಾಗಲೇ ಹಿಂದಿರುಗಲು ಮುಂಗಡವಾಗಿ ಕಾಯ್ದಿರಿಸಿದ್ದ ವಿಮಾನದ ಟಿಕೆಟ್ ಅನ್ನು ರದ್ದುಪಡಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದರ ಮಧ್ಯೆ, ನಿತ್ಯ 30 ಸಾವಿರದಷ್ಟು ವಿದ್ಯಾರ್ಥಿಗಳು ದಾಖಲೆ ಪರಿಶೀಲನೆಗೆ ಆಗಮಿಸುತ್ತಿರುವುದರಿಂದ ಪ್ರಾಧಿಕಾರದ ಸುತ್ತಮುತ್ತ ಜನಸಂದಣಿ ಕಿಕ್ಕಿರಿದು ತುಬಿರುತ್ತದೆ. ಇವರಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲದೆ, ಕುಡಿಯುವ ನೀರಿನ ಸಮಸ್ಯೆಯೂ ಇಲ್ಲದೆ ಪರದಾಡಿದರು.

ಕಾರಣ ಏನು?

ಬೇಗ ದಾಖಲೆ ಪರಿಶೀಲನೆ ಮುಗಿಸಬೇಕೆಂಬ ಕಾರಣಕ್ಕೆ ಅಧಿಕಾರಿಗಳು ನಿತ್ಯ ಅಗತ್ಯಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಆಹ್ವಾನಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ. ನಿತ್ಯ 10ರಿಂದ 12 ಸಾವಿರ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಬೇಕು. ಆದರೆ, ಪ್ರಾಧಿಕಾರ ದುಪ್ಪಟ್ಟು ಅಂದರೆ 30 ಸಾವರಕ್ಕೂ ಹೆಚ್ಚು ಮಕ್ಕಳನ್ನು ಆಹ್ವಾನಿಸುತ್ತಿದೆ ಎನ್ನಲಾಗಿದೆ. ಪ್ರಾಧಿಕಾರದ ಕ್ರಮದ ಬಗ್ಗೆ ಅಲ್ಲಿನ ಸಿಬ್ಬಂದಿಗಳೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರ ಕೂಡ ತಡರಾತ್ರಿವರೆಗೂ ದಾಖಲೆ ಪರಿಶೀಲಬೆ ನಡೆಸಲಾಗಿದೆ. ನಾವೆಲ್ಲಾ ಬೆಳಗಿನಜಾವ ಮನೆಗೆ ತೆರಳಿದ್ದೇವೆ. ಮತ್ತೆ ಮಂಗಳ ವಾರ 9ಗಂಟೆಗೆ ಹಾಜರಾಗಿದ್ದೇವೆ. ಇಂದೂ ಕೂಡ ಬೆಳಗಿನ ಜಾವವೇ ಮನೆಗೆ ಹೋಗಬೇಕಾದ ಲಕ್ಷಣ ಕಂಡು ಬರುತ್ತಿವೆ ಎಂದು ಹೆಸರಳಲಿಚ್ಚಿಸದ ಕೆಲ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ