
ಮೈಸೂರು(ಜು.19): ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವರೇ ಜಾಸ್ತಿ. ಯಾಕೆಂದರೆ ಅಲ್ಲಿ ಖಾಸಗಿ ಶಾಲೆಗಳಂತೆ ಉತ್ತಮ ಶಿಕ್ಷಣ ಸಿಗುವುದಿಲ್ಲ, ಶೈಕ್ಷಣಿಕ ವಾತಾವರಣ ಇರಲ್ಲ ಎನ್ನುವ ವಾದ ಎಲ್ಲರದ್ದು. ಆದರೆ ಇದಕ್ಕೆ ಅಪವಾದ ಎನ್ನುವಂತೆ ಸಾಂಸ್ಕೃತಿಕ ನಗರಿಯಲ್ಲಿ ವಿದೇಶಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ.
FSL ಎನ್ನುವ ಸ್ವಯಂಸೇವಾ ಸಂಸ್ಥೆಯು ದೇಶಾದ್ಯಂತ ವಿದೇಶಿ ವಿದ್ಯಾರ್ಥಿನಿಯರನ್ನು ಆಹ್ವಾನಿಸಿ ಅವರಿಂದ ಮಕ್ಕಳಿಗೆ ಶಿಕ್ಷಣ ಕಲಿಸುವ ಮತ್ತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಅದರ ಭಾಗವಾಗಿ ನಿನ್ನೆ ವಿನಾಯಕ ನಗರ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟ ಸ್ಪೇನ್ ವಿದ್ಯಾರ್ಥಿಗಳ ತಂಡ, ಗೋಡೆಗಳ ಮೇಲೆ ಹಲವಾರು ಚಿತ್ರಗಳನ್ನು ಬರೆದು ಜಾಗೃತಿ ಮೂಡಿಸಿದರು.
ಶಾಲಾ ಮಕ್ಕಳು ದಿನ ನಿತ್ಯ ಯಾವ ರೀತಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂಬ ಪರಿಕಲ್ಪನೆಯನ್ನ ಚಿತ್ರಗಳ ಮೂಲಕ ಬಿಡಿಸಿ ತೋರಿಸಿದರು. ಅಷ್ಟೇ ಅಲ್ಲ, ಮಕ್ಕಳ ಜೊತೆ ಕಲೆತು, ಬೆರೆತು ಸಾಂಸ್ಕೃತಿಕ ವಿನಿಮಯ ಮಾಡಿದಲ್ಲದೆ, ಇಂಗ್ಲೀಷ್ ಪಾಠ ಮಾಡಿದರು.
ಒಟ್ಟಿನಲ್ಲಿ 16 ಸ್ವಯಂ ಸೇವಕರಿರುವ ಸ್ಪೇನ್ ಯುವಕ-ಯುವತಿಯರ ತಂಡ, ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ಕೊಟ್ಟಿದ್ದಲ್ಲದೆ, ಇಂಗ್ಲೀಷ್ ಪಾಠ ಮಾಡಿದರು. ಈ ಮೂಲಕ ಸರ್ಕಾರಿ ಶಾಲೆಗಳ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಲು ಯತ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.