ಅನಿಲ ಸೋರಿಕೆ: 85ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

By Suvarna Web DeskFirst Published May 6, 2017, 6:12 AM IST
Highlights

ಈ ಘಟನೆಯ ಬಳಿಕ ಶಾಲೇಯ ಅನೇಕ ವಿದ್ಯಾರ್ಥಿಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ  ಕಾರ್ಯಚರಣೆ ನಡೆಸಿದೆ.

ನವದೆಹಲಿ (ಮೇ.06): ದೆಹಲಿಯ ತುಘಲಕಾಬಾದ್'ನಲ್ಲಿರುವ  ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ಗ್ಯಾಸ್ ಲೀಕ್ ಆದ ಪರಿಣಾಮ 85ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.    

 ಬೆಳಗಿನ ಜಾವ ಸುಮಾರು 7:35ರ ಹೊತ್ತಿಗೆ ಈ ಘಟನೆ ನಡೆದಿದ್ದು ,  ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರಗೆ ದಾಖಲು ಮಾಡಲಾಗಿದೆ.

ಈ ಘಟನೆಯ ಬಳಿಕ ಶಾಲೇಯ ಅನೇಕ ವಿದ್ಯಾರ್ಥಿಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ  ಕಾರ್ಯಚರಣೆ ನಡೆಸಿದೆ..

ಇನ್ನು ಅನಿಲ ಸೋರಿಕೆಯ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಲ್ಲಿದ್ದಾರೆ.

(ಚಿತ್ರಕೃಪೆ: ಏಎನ್'ಐ)

click me!