
ನವದೆಹಲಿ (ಮೇ.06): ಏಷ್ಯಾನೆಟ್ ಗ್ರೂಪ್'ನಿಂದ ಮತ್ತೊಂದು ಮಾಧ್ಯಮ ಸಂಸ್ಥೆ ಆರಂಭವಾಗಿದ್ದು ಮೊದಲ ದಿನವೇ ಬಿಹಾರ ಮಾಫಿಯಾ ಡಾನ್ ಶಹಾಬುದ್ದೀನ್ -ಲಾಲು ಪ್ರಸಾದ್ ಯಾದವ್'ರನ್ನು ಎಕ್ಸ್'ಪೋಸ್ ಮಾಡಲಾಗಿದೆ.
ಅರ್ನಬ್ ಗೋಸ್ವಾಮಿ ನೇತೃತ್ವದಲ್ಲಿ ಆರಂಭವಾಗಿರುವ ರಿಪಬ್ಲಿಕ್ ನ್ಯೂಸ್ ಚಾನೆಲ್, ಶಹಾಬುದ್ದೀನ್ ಜೈಲಿನಿಂದಲೇ ಲಾಲು ಪ್ರಸಾದ್ ಯಾದವ್ಗೆ ಕರೆ ಮಾಡಿದ್ದನ್ನು ಬಹಿರಂಗಪಡಿಸಿದೆ. ಶಹಾಬುದ್ದೀನ್ ಆರ್'ಜೆಡಿ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್'ಗೆ ಕರೆ ಮಾಡಿ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾನೆ.
2016ರ ಏಪ್ರಿಲ್ 15ರ ಲಾಲು-ಶಹಾಬುದ್ದೀನ್ ನಡುವಿನ ಫೋನ್ ಮಾತುಕತೆ ಬಹಿರಂಗಪಡಿಸಿರುವ ರಿಪಬ್ಲಿಕ್, ಫೈರಿಂಗ್ ಮಾಡಿದ್ದು ಯಾಕೆ, ನಿಮ್ಮ SP ಜೊತೆ ಮಾತಾಡಿ, ಇಲ್ಲದಿದ್ದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತೆ, ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾನೆ.
ನಾನು ಎಸ್'ಪಿ ಜೊತೆ ಮಾತಾಡ್ತೀನಿ ಎಂದು ಆ ಸಂದರ್ಭದಲ್ಲಿ ಲಾಲು ಯಾದವ್ ಭರವಸೆ ಕೊಟ್ಟಿದ್ದರು.
ಸುದ್ದಿ ಬಹಿರಂಗ ಮಾಡದಂತೆ ಅರ್ನಬ್ ಗೋಸ್ವಾಮಿ ಬೆನ್ನು ಬಿದ್ದಿದ್ದ ಲಾಲು, ಗೋಸ್ವಾಮಿಗೆ 36 ಬಾರಿ ದೂರವಾಣಿ ಕರೆ ಮಾಡಿದ್ದಾರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.