ಕೆಪಿಸಿಸಿ ಅಧ್ಯಕ್ಷ ಗಾದಿಗೆ ಪ್ರಬಲವಾಗಿದೆ ರೇಸ್!

By Suvarna Web Desk  |  First Published Mar 4, 2017, 12:52 PM IST

ಕಾಂಗ್ರೆಸ್​ನಲ್ಲಿ ಕೆಪಿಸಿಸಿ ಗಾದಿಯ ಸುತ್ತಲಿನ ರೇಸ್​ ಜೋರಾಗಿದೆ. ಈ ಪೈಕಿ ದಲಿತ ನಾಯಕರ ಲಾಬಿ ತೀವ್ರಗೊಂಡಿದೆ. ಅಧ್ಯಕ್ಷ ಗಾದಿ ಉಳಿಸಿಕೊಳ್ಳಲು ಪರಮೇಶ್ವರ್ ಭಾರೀ ಪ್ರಯತ್ನ ನಡೆಸುತ್ತಿರುವಾಗಲೇ ಇನ್ನೋರ್ವ ದಲಿತ ಮುಖಂಡ ಕೆ.ಹೆಚ್​. ಮುನಿಯಪ್ಪ ತಾನೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಎಂದಿದ್ದಾರೆ.


ಬೆಂಗಳೂರು (ಮಾ.04): ಕಾಂಗ್ರೆಸ್​ನಲ್ಲಿ ಕೆಪಿಸಿಸಿ ಗಾದಿಯ ಸುತ್ತಲಿನ ರೇಸ್​ ಜೋರಾಗಿದೆ. ಈ ಪೈಕಿ ದಲಿತ ನಾಯಕರ ಲಾಬಿ ತೀವ್ರಗೊಂಡಿದೆ. ಅಧ್ಯಕ್ಷ ಗಾದಿ ಉಳಿಸಿಕೊಳ್ಳಲು ಪರಮೇಶ್ವರ್ ಭಾರೀ ಪ್ರಯತ್ನ ನಡೆಸುತ್ತಿರುವಾಗಲೇ ಇನ್ನೋರ್ವ ದಲಿತ ಮುಖಂಡ ಕೆ.ಹೆಚ್​. ಮುನಿಯಪ್ಪ ತಾನೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಎಂದಿದ್ದಾರೆ.

ಒಂದೆಡೆ ಹಾಲಿ ಅಧ್ಯಕ್ಷ ಜಿ. ಪರಮೇಶ್ವರ್​ ಕೆಪಿಸಿಸಿ ಗಾದಿ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರೆ, ಇನ್ನೊಂದೆಡೆ ಪರಮೇಶ್ವರ್​ಗೆ ತೊಡೆ ತಟ್ಟುವಂತೆ ಕೆ.ಹೆಚ್​. ಮುನಿಯಪ್ಪ ತಾನೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಂತ ಇವತ್ತು ಬಹಿರಂಗ ಹೇಳಿಕೆ ನೀಡಿದ್ದಾರೆ. ಜನ ನನ್ನನ್ನ 7 ಬಾರಿ ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಪಕ್ಷದ ಹೈಕಮಾಂಡ್​ ನನ್ನನ್ನು 10 ವರ್ಷ ಕೇಂದ್ರ ಸಚಿವರಾಗಿ ಆಯ್ಕೆ ಮಾಡಿದೆ. ಹೈಕಮಾಂಡ್​ ಕೊಟ್ಟ ಎಲ್ಲ ಜವಾಬ್ದಾರಿ ನಿಬಾಯಿಸಿದ್ದೇನೆ, ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ನನಗೆ ನೀಡಿದರೆ ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಅಂತ ಮುನಿಯಪ್ಪ ಹೇಳಿದ್ರು.

Tap to resize

Latest Videos

ಇಷ್ಟಕ್ಕೇ ನಿಲ್ಲಿಸದ ಮುನಿಯಪ್ಪ, ಜಿ. ಪರಮೇಶ್ವರ್ ಅವರಿಗೆ ಗೃಹ ಸಚಿವ ಸ್ಥಾನ ಕೊಟ್ಟದ್ದು ಹೇಗೆ ಅನ್ನೋದು ಗೊತ್ತಿಲ್ಲ, ಎರಡು ಹುದ್ದೆಗಳನ್ನು ನಿಭಾಯಿಸಲು ಅವರಿಗೆ ಕಷ್ಟವಾಗುತ್ತೆ, ಸಚಿವ ಸ್ಥಾನ ನೀಡಿದ ಮೇಲೆ, ಬೇರೊಬ್ಬ ಅಧ್ಯಕ್ಷರ ಆಯ್ಕೆ ಮಾಡುವಂತಹ ಪ್ರಕ್ರಿಯೆ ಶುರುವಾಗಬೇಕಿತ್ತು, ಈಗಲಾದ್ರು ಹೈಕಮಾಂಡ್ ಶೀಘ್ರ ಈ ಕೆಲಸ ಮಾಡಲಿ ಎಂದೂ ಹೇಳಿದ್ರು.

ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​ ಇನ್ನೋರ್ವ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲು ಸಹಕರಿಸುವಂತೆ ಮನವಿ ಮಾಡಿದ್ರು. ಈ ವೇಳೆ ಮಾತನಾಡಿದ್ದ ಖರ್ಗೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಹೈಕಮಾಂಡ್ ಅಭಿಪ್ರಾಯ ಕೇಳಿದಾಗಿ ತಿಳಿಸೋದಾಗಿ ಹೇಳಿದ್ರು.

ಹಾಲಿ ಇಂಧನ ಸಚಿವರಾಗಿರುವ ಡಿ.ಕೆ. ಶಿವಕುಮಾರ್​ ಕೂಡ ಕೆಪಿಸಿಸಿ ಅಧ್ಯಕ್ಷ ಗಾದಿಯ ಆಕಾಂಕ್ಷಿ. ಈಗಾಗಲೇ ಹೈಕಮಾಂಡ್​ ನಾಯಕರು ಒಂದು ಹಂತದಲ್ಲಿ ಡಿಕೆ ಶಿವಕುಮಾರ್ ಹೆಸರನ್ನು ಅಂತಿಮ ಸುತ್ತಿನ ಚರ್ಚೆಯವರೆಗೂ ತಂದಿದ್ರು. ಆದರೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಹೈಕಮಾಂಡ್​ ಇನ್ನೂ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ. ಸಿಎಂ ಸಿದ್ದರಾಮಯ್ಯ ಆರಂಭದಿಂದಲೂ ಎಸ್​.ಆರ್. ಪಾಟೀಲ್ ಹೆಸರನ್ನೇ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಶಿಫಾರಸು ಮಾಡುತ್ತಾ ಬಂದಿದ್ದಾರೆ. ಆದರೆ ಹೈಕಮಾಂಡ್​ ಹಸಿರು ನಿಶಾನೆ ನೀಡಿಲ್ಲ. ಇವರೆಲ್ಲರ ನಡುವೆ ಮಲ್ಲಿಕಾರ್ಜುನ ಖರ್ಗೆಯವರೇ ಬ್ಲಾಕ್​ ಹಾರ್ಸ್​​ನಂತೆ ಕೆಪಿಸಿಸಿ ಅಧ್ಯಕ್ಷರಾಗಿ ಬಂದರೂ ಅಚ್ಚರಿ ಇಲ್ಲ ಎಂಬ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡುತ್ತಿದೆ.

 

click me!