
ವಿಧಾನಪರಿಷತ್(ನ.21): ವಿಧಾನಸೌಧದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ ಎಂಬ ಕಾರಣಕ್ಕೆ ನಾಯಿಗಳ ನಿಯಂತ್ರಣಕ್ಕೆ ಮುಂದಾದರೆ ‘ಪೆಟಾ’ ಅಡ್ಡಗಾಲು ಹಾಕುತ್ತದೆ. ವಾಸ್ತವವಾಗಿ ‘ಪೆಟಾ’ದಂತಹ ಸಂಘಟನೆಗಳಿಂದ ‘ಪೆಟಾ’ ಮೂಲಭೂತವಾದ ಆರಂಭವಾಗಿದೆ. ನಾಯಿ ಕಾಟ ಎಷ್ಟು ಸಮಸ್ಯೆ ಎಂಬುದು (ಪೇಟಾದವರಿಗೆ) ಅವರ ಮಕ್ಕಳಿಗೆ ನಾಯಿ ಕಚ್ಚಿದಾಗಲೇ ಅರ್ಥವಾಗುತ್ತದೆ.
-ಹೀಗಂತ ‘ಪೆಟಾ’ ವಿರುದ್ಧ ಹರಿಹಾಯ್ದಿದ್ದಾರೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್. ವಿಧಾನಪರಿಷತ್‌ನಲ್ಲಿ ಬಸವರಾಜ ಹೊರಟ್ಟಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ಹಂದಿ ಹಾಗೂ ನಾಯಿಗಳ ಕಾಟ ಹೆಚ್ಚಾಗಿದೆ. ಪದೇ ಪದೇ ಮಕ್ಕಳ ಮೇಲೆ ದಾಳಿಗಳು ನಡೆಯುತ್ತಿದ್ದು, ನಾಯಿಗಳು ಬೈಕ್' ಸವಾರರ ಮೇಲೆ ದಾಳಿಗಳು ಮಾಡಿ ಅಪಘಾತಗಳು ಉಂಟಾಗುತ್ತಿವೆಯೆಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ರೋಷನ್ ಬೇಗ್, ವಿದೇಶಿಯರು ಹೆಚ್ಚಾಗಿ ಬರುತ್ತಾರೆ. ಅವರು ಬಂದಾಗ ವಿಧಾನಸೌಧದ ಮುಂದೆ ನಾಯಿಗಳ ಹಿಂಡು ಇದ್ದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ನಿಯಂತ್ರಣಕ್ಕೆ ಮುಂದಾಗಿದ್ದೆ. ಆದರೆ ಆ ವೇಳೆ ಪೆಟಾದವರು,ಮನೇಕಾ (ಮನೇಕಾ ಗಾಂಧಿ) ಅವರು ಕಾಟ ಕೊಟ್ಟು ಗಲಾಟೆಮಾಡಿದ್ದರು. ಪ್ರತಿಯೊಂದಕ್ಕೂ ಇಂತಹ ಮೂಲಭೂತ ವಾದಿಕಾರ್ಯಕರ್ತರು ಅಡ್ಡ ಬರುತ್ತಾರೆ. ಅವರ ಮಕ್ಕಳಿಗೆ ಸಮಸ್ಯೆಯಾದಾಗ ಅವರಿಗೆ ಸಮಸ್ಯೆಯ ಅರಿವಾಗುತ್ತದೆ ಎಂದರು.
ಇದಕ್ಕೂ ಮುನ್ನ ಹುಬ್ಬಳ್ಳಿ-ಧಾರವಾಡದಲ್ಲಿ ಹಂದಿಗಳ ಸಮಸ್ಯೆ ನಿವಾರಣೆ ಕುರಿತು ಮಾತನಾಡಿದ ಅವರು, ಹುಬ್ಬಳ್ಳಿಯ ಹಂದಿಗಳ ಸಮಸ್ಯೆಗೆ ನಗರದ ಹೊರಗಡೆ ಫಾರ್ಮ್ ಮಾಡಿ ಹಂದಿಗಳನ್ನೆಲ್ಲಾ ಸ್ಥಳಾಂತರ ಮಾಡಲಾಗುವುದು. ಜತೆಗೆ ನಗರದಲ್ಲಿರುವ ಹೋಟೆಲ್‌ಗಳ ತ್ಯಾಜ್ಯ ಸಂಗ್ರಹಿಸಿ ಹಂದಿಗಳಿಗೆ ಪೂರೈಸಲಾಗುವುದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಸವರಾಜ ಹೊರಟ್ಟಿ, ಅವುಗಳಿಗೆ ಪುನರ್ವಸತಿ ಕಲ್ಪಿಸಿ ಆರ್ಥಿಕ ಹೊರೆ ಮಾಡಿಕೊಳ್ಳುವುದು ಬೇಡ. ನಗರದಲ್ಲಿ ಹಂದಿಗಳಿಲ್ಲದಂತೆ ಮಾಡಿ ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.