ಅಕ್ಟೋಪಸ್‌, ನಕ್ಷತ್ರ ಮೀನುಗಳ ಮಳೆ!

First Published Jun 16, 2018, 8:00 AM IST
Highlights

ಚೀನಾದ ಕ್ವಿಂಗ್‌ಡಾ ನಗರದಲ್ಲಿ ಧಾರಾಕಾರ ಬಿರುಗಾಳಿ ಸಹಿತ ಮಳೆಯಾದ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಗಳು ಧರೆಗುರುಳಿವೆ. ನಗರದ ರಸ್ತೆಗಳೆಲ್ಲವೂ ಕೆರೆಗಳಂತಾಗಿವೆ. , ಈ ನಡುವೆ, ಬಿರುಗಾಳಿ ಪರಿಣಾಮವಾಗಿ ಅಕ್ಟೋಪಸ್‌(ಅಷ್ಟಪದಿ) ಸೇರಿದಂತೆ ಇತರ ಸಮುದ್ರದ ದೈತ್ಯ ಪ್ರಾಣಿಗಳು ಆಕಾಶದಿಂದ ಭುವಿಗೆ ಬೀಳುತ್ತಿರುವ ದೃಶ್ಯಗಳು ನಗರದ ನಿವಾಸಿಗಳನ್ನು ಆಶ್ಚರ್ಯದ ಕಡಲಲ್ಲಿ ಮುಳುಗಿಸಿದೆ.

ಕ್ವಿಂಗ್‌ಡಾ: ಚೀನಾದ ಕ್ವಿಂಗ್‌ಡಾ ನಗರದಲ್ಲಿ ಧಾರಾಕಾರ ಬಿರುಗಾಳಿ ಸಹಿತ ಮಳೆಯಾದ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಗಳು ಧರೆಗುರುಳಿವೆ.

ನಗರದ ರಸ್ತೆಗಳೆಲ್ಲವೂ ಕೆರೆಗಳಂತಾಗಿವೆ. ಆದರೆ, ಈ ನಡುವೆ, ಬಿರುಗಾಳಿ ಪರಿಣಾಮವಾಗಿ ಅಕ್ಟೋಪಸ್‌(ಅಷ್ಟಪದಿ) ಸೇರಿದಂತೆ ಇತರ ಸಮುದ್ರದ ದೈತ್ಯ ಪ್ರಾಣಿಗಳು ಆಕಾಶದಿಂದ ಭುವಿಗೆ ಬೀಳುತ್ತಿರುವ ದೃಶ್ಯಗಳು ನಗರದ ನಿವಾಸಿಗಳನ್ನು ಆಶ್ಚರ್ಯದ ಕಡಲಲ್ಲಿ ಮುಳುಗಿಸಿದೆ.

ಬಿರುಗಾಳಿಯ ಪ್ರಭಾವಕ್ಕೆ ಸಿಕ್ಕಿದ ಸಮುದ್ರದ ಜಲಚರಗಳು ಗಾಳಿಯಲ್ಲಿ ತೇಲಿಕೊಂಡು ನಗರದ ಜನವಸತಿ ಪ್ರದೇಶಗಳ ಮೇಲೆ ಬಿದ್ದಿದೆ. ನಕ್ಷತ್ರ ಮೀನು, ಶಂಕದ ಮೀನು, ಅಕ್ಟೋಪಸ್‌ ಹೀಗೆ ಗಾಳಿಯಲ್ಲಿ ಹಾರಿಬಂದಿದ್ದು ಜನಸಾಮನ್ಯರನ್ನು ಆತಂಕಕ್ಕೆ ಗುರಿಮಾಡಿದೆ.

click me!