ಗೌರಿ ಲಂಕೇಶ್ ಗೆ ಮಹಮ್ಮದ್‌ ಅಲಿ ಪ್ರಶಸ್ತಿ

First Published Jun 16, 2018, 7:49 AM IST
Highlights

ಸಾಮಾಜಿಕ ಕಳಕಳಿ ಮತ್ತು ಕೋಮು ಸೌಹಾರ್ದತೆಗೆ ಬದ್ಧರಾಗಿ ಕ್ರಿಯಾಶೀಲವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ಮರಣೋತ್ತರ ಡಾ.ಎನ್‌.ಎಂ.ಮಹಮ್ಮದ್‌ ಅಲಿ ದತ್ತಿ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲು ಕೇರಳ ಗೆಜೆಟೆಡ್‌ ಅಧಿಕಾರಿಗಳ ಸಂಘ (ಕೆಜಿಒಅ) ನಿರ್ಧರಿಸಿದೆ. 
 

ಬೆಂಗಳೂರು :  ಸಾಮಾಜಿಕ ಕಳಕಳಿ ಮತ್ತು ಕೋಮು ಸೌಹಾರ್ದತೆಗೆ ಬದ್ಧರಾಗಿ ಕ್ರಿಯಾಶೀಲವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ಮರಣೋತ್ತರ ಡಾ.ಎನ್‌.ಎಂ.ಮಹಮ್ಮದ್‌ ಅಲಿ ದತ್ತಿ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲು ಕೇರಳ ಗೆಜೆಟೆಡ್‌ ಅಧಿಕಾರಿಗಳ ಸಂಘ (ಕೆಜಿಒಅ) ನಿರ್ಧರಿಸಿದೆ. 

ಇತ್ತೀಚೆಗೆ ತಿರುವನಂತಪುರದಲ್ಲಿ ನಡೆದ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೊದಲು ವೈದ್ಯಕೀಯ ಕ್ಷೇತ್ರದವರಿಗೆ ಹಾಗೂ ಕಳೆದ ವರ್ಷ ಕಾರ್ಮಿಕ ಸಂಘಟನೆ ಮುಖಂಡರಿಗೆ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಸಾಮಾಜಿಕ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಲು ಸಮಿತಿ ನಿರ್ಧರಿಸಲಾಗಿದೆ. ಪ್ರಶಸ್ತಿಯು 50 ಸಾವಿರ ರು. ಮತ್ತು ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜೂ.22ರಂದು ತಿರುವನಂತಪುರದ ವಿಜೆಟಿ ಸಭಾಂಗಣದಲ್ಲಿ ನಡೆಯಲಿದೆ.

ಹಲವಾರು ಮನೋವೈಜ್ಞಾನಿಕ, ವೈಚಾರಿಕ ವಿಶ್ಲೇಷಣೆಯುಳ್ಳ ಪುಸ್ತಕಗಳನ್ನು ಹಾಗೂ ಕಾದಂಬರಿಯನ್ನು ಅಲಿ ಅವರು ಬರೆದಿದ್ದಾರೆ. ಅವರ ಹೆಸರಿನಲ್ಲಿ ಸಂಘವು 2016ರಿಂದ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು 50 ಸಾವಿರ ರು. ಮತ್ತು ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜೂ.22ರಂದು ತಿರುವನಂತಪುರದ ವಿಜೆಟಿ ಸಭಾಂಗಣದಲ್ಲಿ ನಡೆಯಲಿದೆ.

click me!