ಹಾವೇರಿ ಜಿಲ್ಲಾಸ್ಪತ್ರೆ ಖಾಸಗಿ ಲ್ಯಾಬ್ ದಂಧೆ ಜೋರು: ಪರವಾನಗಿಯಿಲ್ಲದೆ ನಡೆಯುತ್ತಿವೆ ಲ್ಯಾಬ್'ಗಳು

Published : Mar 01, 2017, 03:39 AM ISTUpdated : Apr 11, 2018, 01:06 PM IST
ಹಾವೇರಿ ಜಿಲ್ಲಾಸ್ಪತ್ರೆ ಖಾಸಗಿ ಲ್ಯಾಬ್ ದಂಧೆ ಜೋರು: ಪರವಾನಗಿಯಿಲ್ಲದೆ ನಡೆಯುತ್ತಿವೆ ಲ್ಯಾಬ್'ಗಳು

ಸಾರಾಂಶ

ಹಾವೇರಿ ಜಿಲ್ಲಾಸ್ಪತ್ರೆ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ರಕ್ತ ತಪಾಸಣೆಯ ಲ್ಯಾಬ್ ಇದೆ. ಆದರೆ ಇಲ್ಲಿಯ ವೈದ್ಯರು ರೋಗಿಗಳನ್ನು ಖಾಸಗಿ ಲ್ಯಾಬ್'ಗಳಿಗೆ ಚಿಟಿ ಬರೆದು ಕಳುಹಿಸುತ್ತಿದ್ದಾರೆ. ದುರಂತ ಅಂದರೆ ವೈದ್ಯರು ಕಳುಹಿಸುವ ಖಾಸಗಿ ಲ್ಯಾಬ್'ಗಳಿಗೆ ಪರವಾನಗಿಯೇ ಇಲ್ಲ. ಆಸ್ಪತ್ರೆ ಪಕ್ಕದಲ್ಲಿಯೇ ನಾಯಿಕೊಡೆಗಳಂತೆ ತಲೆ ಎತ್ತಿರುವ ಈ ಲ್ಯಾಬ್ ಗಳ ಜತೆ ವೈದ್ಯರು ಕಮಿಷನ್ ಪಡೆಯುತ್ತಾರೆ ಎನ್ನುವ ಆರೋಪವಿದೆ.

ಹಾವೇರಿ(ಮಾ.01): ಹಾವೇರಿ ಜಿಲ್ಲಾಸ್ಪತ್ರೆ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ರಕ್ತ ತಪಾಸಣೆಯ ಲ್ಯಾಬ್ ಇದೆ. ಆದರೆ ಇಲ್ಲಿಯ ವೈದ್ಯರು ರೋಗಿಗಳನ್ನು ಖಾಸಗಿ ಲ್ಯಾಬ್'ಗಳಿಗೆ ಚಿಟಿ ಬರೆದು ಕಳುಹಿಸುತ್ತಿದ್ದಾರೆ. ದುರಂತ ಅಂದರೆ ವೈದ್ಯರು ಕಳುಹಿಸುವ ಖಾಸಗಿ ಲ್ಯಾಬ್'ಗಳಿಗೆ ಪರವಾನಗಿಯೇ ಇಲ್ಲ. ಆಸ್ಪತ್ರೆ ಪಕ್ಕದಲ್ಲಿಯೇ ನಾಯಿಕೊಡೆಗಳಂತೆ ತಲೆ ಎತ್ತಿರುವ ಈ ಲ್ಯಾಬ್ ಗಳ ಜತೆ ವೈದ್ಯರು ಕಮಿಷನ್ ಪಡೆಯುತ್ತಾರೆ ಎನ್ನುವ ಆರೋಪವಿದೆ.

ಇದು ಹಾವೇರಿ ಜಿಲ್ಲಾಸ್ಪತ್ರೆ. ಇಲ್ಲಿದೆ ಪ್ರತಿನಿತ್ಯ 1 ರಿಂದ 2 ಸಾವಿರ ಜನರು ಬರುತ್ತಾರೆ. ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಜನರು ಉಚಿತ ಹಾಗೂ ಉತ್ತಮ ಚಿಕಿತ್ಸೆ ದೊರೆಯುತ್ತೆ ಎನ್ನುವ ವಿಶ್ವಾಸದ ಮೇಲೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ  ಜನರ ಪಾಲಿಗೆ ಈ ಆಸ್ಪತ್ರೆ ಇದ್ದು  ಸತ್ತಂತಾಗಿದೆ. ಜಿಲ್ಲಾಸ್ಪತ್ರೆ ಯಲ್ಲಿ ರಕ್ತ ತಪಾಸಣೆ ಮಾಡುವ ಪ್ರಯೋಗಾಲಯವಿದೆ. ಆದರೆ ಇಲ್ಲಿಗೆ ಜನರು ಹೋಗುವುದು ತುಂಬಾ ಕಡಿಮೆ. ಹಾಗಾದರೆ ಇವರೆಲ್ಲ ಮತ್ತೆಲ್ಲಿಗೆ ಹೋಗುತ್ತಾರೆ ಎನ್ನುದನ್ನ ಕಂಡು ಹಿಡಿಯಲು ಸುವರ್ಣನ್ಯೂಸ್ ಅವರ ಹಿಂದೆ ಬಿದ್ದಾಗ, ದುರಂತದ ಸಂಗತಿಯೊಂದು ಸುವರ್ಣನ್ಯೂಸ್ ಕ್ಯಾಮರ ಕಣ್ಣಲ್ಲಿ ಸೆರೆಯಾಗಿದೆ.

ಸಿನಿಮಾ ಮಂದಿರಗಳಿಗೆ  ಹೋಗುವ ಹಾಗೆ ಆಸ್ಪತ್ರೆ ಅಕ್ಕಪಕ್ಕದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಪ್ರಯೋಗಾಲಯಗಳಿಗೆ ಜನರು ಹೋಗುತ್ತಾರೆ. ಇವರೆಲ್ಲ ಸುಮ್ಮನೆ ಇಲ್ಲಿಗೆ ಹೋಗಲ್ಲ, ಸ್ವತಃ ಜಿಲ್ಲಾಸ್ಪತ್ರೆ ವೈದ್ಯರೇ ಇವರನ್ನು ಇಲ್ಲಿಗೆ ಕಳುಹಿಸುತ್ತಾರೆ. ವೈದ್ಯರ ಟೇಬಲ್ ಮೇಲೆ ಈ ಖಾಸಗಿ ಪ್ರಯೋಗಾಲಯಗಳ ಚೀಟಿ ಇದೆ. ರಾಜಾರೋಷವಾಗಿ ಯಾರ ಭಯವೂ ಇಲ್ಲದೆ ಈ ಚೀಟಿಯಲ್ಲಿ ವೈದ್ಯರು ಬರೆದು ಕಳುಹಿಸುತ್ತಾರೆ. ಹೀಗೆ ಬರೆದು ಕಳುಹಿಸುವುದು ತಪ್ಪು ಎನ್ನುವುದು ವೈದ್ಯರಿಗೆ ಗೊತ್ತಿದ್ದು ಅಲ್ಲಿಗೆ ಕಳುಹಿಸಿ ಜನರ ಸುಲಿಗೆ ಮಾಡಿಸುತ್ತಿದ್ದಾರೆ. ೩೦೦ ರೂಪಾಯಿಯಿಂದ 700 ರೂಪಾಯಿಗಳವರೆಗೆ ಖಾಸಗಿ ಪ್ರಯೋಗಾಲಯಗಳು ಜನರ ಬಳಿ ಹಣ ವಸೂಲಿ ಮಾಡುತ್ತಿವೆ.

ಕಮಿಷನ್ ಆಸೆಗಾಗಿ ವೈದ್ಯರು ಖಾಸಗಿ ಪ್ರಯೋಗಾಲಯಗಳಿಗೆ ಜನರನ್ನ ಕಳುಹಿಸುತ್ತಿದ್ದಾರೆ. ಇನ್ನೊಂದು ದುರಂತದ ಸಂಗತಿ ಅಂದ್ರೆ ಈ ಖಾಸಗಿ ಪ್ರಯೋಗಾಲಯಗಳಿಗೆ ಪರವಾನಗಿಯೆ ಇಲ್ಲ. ಹಿಂದೆ ಆದರ್ಶ ಲ್ಯಾಬ್ ಹೆಸರಿನಲ್ಲಿ ನಡೆಯುತ್ತಿದ್ದ ಪ್ರಯೋಗಾಲಯ ಈಗ ಮಾಲತೇಶ್ ಲ್ಯಾಬ್ ಹೆಸರಿನಲ್ಲಿ ತಲೆ ಎತ್ತಿದೆ. ಆದ್ರೆ ಹೊರಗಡೆ ಇದಕ್ಕೆ ನಾಮಫಲಕವೆ ಇಲ್ಲ. ಈ ಪ್ರಯೋಗಾಲಯ ಕೊಟ್ಟ ವರದಿಯಿಂದ ಹಿಂದೆ ಜನರಿಗೆ ತೊಂದರೆಯಾಗಿ ಇದನ್ನ ಬಂದ್ ಮಾಡಿದ್ದರು. ಈಗ ಇದು ಮತ್ತೆ ಆರಂಭವಾಗಿದೆ. ರಾಜು ಎನ್ನುವವರಿಗೆ ಸೇರಿದ ಈ ಪ್ರಯೋಗಾಲಯದಲ್ಲಿ ಕಾಲಿಡಲು ಸಹ ಸ್ಥಳವಿಲ್ಲ. ಒಬ್ಬಳು ಹುಡುಗಿ ಎಲ್ಲವನ್ನ ಮೆಂಟೆನ್ ಮಾಡುತ್ತಾಳೆ. ಇನ್ನೂ ಕಾಗಿನೆಲೆ ರಸ್ತೆಯಲ್ಲಿರುವ ವಿಶ್ವ ಲ್ಯಾಬಿಗೂ ಸಹ ಪರವಾನಗಿ ಇಲ್ಲ. ಕಳೆದ ೯ ತಿಂಗಳ ಹಿಂದೆ ಇದು ತಲೆ ಎತ್ತಿದೆ. ವಿಶ್ವನಾಥ್​ ಇದರ ಮಾಲೀಕನಾಗಿದ್ದು ಹೆಂಡತಿ ಹೆಸರಿನಲ್ಲಿ ನಡೆಸುತ್ತಿದ್ದಾನೆ. ಮತ್ತೊಂದು ಸಂಗತಿ ಅಂದರೆ ಈ ವಿಶ್ವನಾಥ್​ ಜಿಲ್ಲಾಸ್ಪತ್ರೆ ಯ ಎ.ಆರ್.ಟಿ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಗುತ್ತಿಗೆ ಆಧಾರದ ಮೇಲೆ ಕೇಲಸ ಮಾಡುತ್ತಿದ್ದಾನೆ. ಈತ ಜಿಲ್ಲಾಸ್ಪತ್ರೆ ಯಲ್ಲಿ ಇರುವುದಕ್ಕಿಂತ ಹೆಚ್ಚಾಗಿ ತನ್ನ ಸ್ವಂತ ಲ್ಯಾಬ್​'ನಲ್ಲಿಯೇ ಉಳಿಯುತ್ತಾನೆ.

ಸಂಹಿತಾ ಎನ್ನುವ ಮತ್ತೊಂದು ಲ್ಯಾಬ್ ಸಹ ಇಲ್ಲಿಯೆ ಇದೆ. ಈ ಲ್ಯಾಬ್ ಒಳಗೆ ಉಸಿರಾಡುವುದಕ್ಕೂ ಸಹ ಸ್ಥಳ ಇಲ್ಲ. ಸರಕಾರಿ ನಿಯಮದ ಪ್ರಕಾರ ೧೫೦ ಸ್ಕ್ವೇರ್ ಫೀಟ್ ಇರಬೇಕು. ಒಳಗಡೆ ಎಸಿ ಇರಬೇಕು ಆದರೆ ಇಲ್ಲಿ ಏನು ಇಲ್ಲ. ಇದರ ಮಾಲೀಕ ವಿನಾಯಕ. ಇತನು ಸಹ ಜಿಲ್ಲಾಸ್ಪತ್ರೆ ಯಲ್ಲಿ ಟಿ.ಬಿ ಸೆಂಟರನಲ್ಲಿ ಗುತ್ತಿಗೆ ಆದಾರದ ಮೇಲೆ ಕೇಲಸ ಮಾಡುತ್ತಾನೆ. ಹೀಗೆ ಜಿಲ್ಲಾಸ್ಪತ್ರೆಯ ಪಕ್ಕದಲ್ಲಿ ಈ ರಕ್ತತಪಾಸಣಾ ಪ್ರಯೋಗಾಲಯಗಳು ತಲೆ ಎತ್ತಿದ್ದು, ಅವರ ಜತೆ ವೈದ್ಯರು ಶಾಮಿಲಾಗಿ ಜನರ ಸುಲಿಗೆ ಮಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೀರಿಯಲ್‌ ನಟಿ ಅ*ತ್ಯಾಚಾರ ಮಾಡಿ ಬೆದರಿಸಿ ಮದುವೆ, ಈಗ ನಡುರಸ್ತೆಯಲ್ಲಿಯೇ ಅತ್ತೆ-ಮಾವನ ಮೇಲೆ ಹಲ್ಲೆ!
2 ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿಗೆ ಹೋಯ್ತು?, ವಿಪಕ್ಷಗಳ ಆಕ್ರೋಶಕ್ಕೆ ಹೆಬ್ಬಾಳ್ಕರ್ ಭಾವುಕ, ನಾನು ಮಹಿಳೆ ಎಂಬ ಕಾರಣಕ್ಕೆ ಹೀಗೆ ಮಾಡ್ತೀರಾ ಎಂದ ಸಚಿವೆ