ಬದುಕಿದ್ದಾರಾ ಆ್ಯಪಲ್ ಕಂಪನಿ ಒಡೆಯ ಸ್ಟೀವ್ಸ್ ಜಾಬ್ಸ್?

By Web Desk  |  First Published Aug 27, 2019, 2:01 PM IST

ಬದುಕಿದ್ದಾರಾ ಆ್ಯಪಲ್ ಕಂಪನಿ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್| ಫೋಟೋ ವೈರಲ್ ಆದ ಬೆನ್ನಲ್ಲೇ ಮತ್ತೆ ಹುಟ್ಟಿಕೊಂಡಿದೆ ಅನುಮಾನ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ ಹಿಂದಿನ ಸತ್ಯವೇನು?


ಕೈರೋ[ಆ.27]: 2011ರಲ್ಲಿ ವಿಶ್ವದ ದೊಡ್ಡ ತಂತ್ರಜ್ಞಾನ ಕಂಪನಿ ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ತಮ್ಮ 56ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದರು.  ಮೇದೋಜಿರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ಟೀವ್ ಜಾಬ್ಸ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಅವರ ಅಂತಿಮ ಕ್ರಿಯೆಯ ಫೋಟೋಗಲೂ ವೈರಲ್ ಆಗಿದ್ದವು. ಆದರೀಗ ಫೋಟೋ ಒಂದು ವೈರಲ್ ಆಗುತ್ತಿದ್ದು, ಸ್ಟೀವ್ ಜಾಬ್ಸ್ ಬದುಕಿದ್ದಾರೆಂಬ ಸುದ್ದಿ ಹರಿದಾಡಲಾರಂಬಿಸಿದೆ. 

25 ಆಗಸ್ಟ್, ರವಿವಾರದಂದು ರೆಡಿಟ್ ನಲ್ಲಿ ಪೋಸ್ಟ್ ಮಾಡಲಾದ ಫೋಟೋ ಒಂದು ಬಹಳಷ್ಟು ವೈರಲ್ ಆಗಿದ್ದು, ಭಾರೀ ಚರ್ಚೆ ಹುಟ್ಟು ಹಾಕಿದೆ. ಈಜಿಪ್ಟ್‌ನ ಕೈರೋ ನಗರದ ರಸ್ತೆಬದಿಯಲ್ಲಿ ವ್ಯಕ್ತಿಯೊಬ್ಬ ಕುಳಿತುಕೊಂಡಿರುವ ಪೋಟೋ ಇದಾಗಿದೆ. ಈ ಫೋಟೋ ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಎಂಬುವುದು ಹಲವರ ಅಭಿಪ್ರಾಯವಾಗಿದೆ.

Tap to resize

Latest Videos

ಕುಳಿತುಕೊಂಡ ಶೈಲಿಯೂ ಸ್ಟೀವ್ಸ್‌ರಂತಿದೆ

 ಹೌದು ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಸ್ಟೀವ್ ಜಾಬ್ಸ್ ರನ್ನು ಹೋಲುತ್ತಿದ್ದಾರೆ. ಇನ್ನು ಕುಳಿತುಕೊಂಡ ವ್ಯಕ್ತಿ ಕಾಲಿಗೆ ಚಪ್ಪಲಿ ಅಥವಾ ಶೂ ಕೂಡಾ ಧರಿಸಿಲ್ಲ. ಇತ್ತ ಆ್ಯಪಲ್ ಕಂಪೆರನಿಯ ಒಡೆಯರಾಗಿದ್ದ ಸ್ಟೀವ್ ಜಾಬ್ಸ್ ಕೂಡಾ ಏನಾದರೂ ಯೋಚಿಸುವ ಸಂದರ್ಭದಲ್ಲಿ ಕಾಲಿಗೆ ಚಪ್ಪಲಿ ಅಥವಾ ಶೂ ಧರಿಸುವುದನ್ನು ಇಷ್ಟಪಡುತ್ತಿರಲಿಲ್ಲ. 

ಇದನ್ನು ಹೊರತುಪಡಿಸಿ ಫೋಟೋದಲ್ಲಿರುವ ವ್ಯಕ್ತಿ ಧರಿಸಿರುವ ಕನ್ನಡಕವೂ ಸ್ಟೀವ್ ಜಾಬ್ಸ್ ರಂತಿದೆ. ಇದನ್ನು ನೋಡಿದ ವ್ಯಕ್ತಿಯೊಬ್ಬ ರೆಡಿಟ್ ನಲ್ಲಿ ಕಮೆಂಟ್ ಮಾಡುತ್ತಾ 'ಇದೊಂದು ತಮಾಷೆ ಎಂದು ನನಗೆ ತಿಳಿದಿದೆ. ಆದರೆ ಈ ವ್ಯಕ್ತಿ ಸ್ಟೀವ್ ಜಾಬ್ಸ್ ರನ್ನು ಹೋಲುತ್ತಾಋಎ ಎಂಬುವುದು ನಂಬಲಾಗುತ್ತಿಲ್ಲ' ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿಯೂ ಕಮೆಂಟ್ ಮಾಡುತ್ತಾ 'ತಾನು ಸ್ಟೀವ್ ಜಾಬ್ಸ್ ರಂತೆ ಕಾಣುತ್ತೇನೆಬ ಎಂಬ ವಿಚಾರ ಫೋಟೋದಲ್ಲಿರುವ ವ್ಯಕ್ತಿಗೂ ತಿಳಿದಿದೆ. ಹೀಗಾಗಿ ಅವರು ಜಾಬ್ಸ್ ರಂತೆ ಕನ್ನಡಕ ಧರಿಸಿದ್ದಾರೆ' ಎಂದಿದ್ದಾರೆ.

ಹಾಗಾದ್ರೆ ಇದು ಸ್ಟೀವ್ಸ್ ಜಾಬ್ಸ್ ಆಗಿರಬಹುದಾ ಎಂದು ಅನುಮಾನಿಸುವ ಮೊದಲು, ಇದು ಅಸಾಧ್ಯ ಎಂಬುವುದು ನಿಮ್ಮ ಗಮನದಲ್ಲಿರಲಿ. ಯಾಕೆಂದರೆ ಆ್ಯಪಲ್ ಒಡೆಯನ ಅಂತಿಮ ಕ್ರಿಯೆಯ ಫೋಟೋಗಳು 2011ರಲ್ಲೇ ಎಲ್ಲೆಡೆ ಹರಿದಾಡಿದ್ದವು. ಹೀಗಾಗಿ ಫೋಟೋದಲ್ಲಿರುವ ವ್ಯಕ್ತಿ ಸ್ಟೀವ್ ಜಾಬ್ಸ್ ಹೋಲಿಕೆ ಹೊಂದಿರಬಹುದಷ್ಟೇ.

5 ವರ್ಷ ಹಿಂದೆಯೂ ಹೀಗೇ ನಡೆದಿತ್ತು

ಸೋಶಿಯಲ್ ಮೀಡಿಯಾದಲ್ಲಿ ಸ್ಟೀವ್ ಜಾಬ್ಸ್ ಬದುಕಿದ್ದಾರೆಂಬ ಸುದ್ದಿ ಹರಿದಾಡುತ್ತಿರುವುದು ಇದು ಮೊದಲಲ್ಲ. ಸುಮಾರು 5 ವರ್ಷಗಳ ಹಿಂದೆ ಯೂ ಫೋಟೋ ಒಂದು ಬಹಳಷ್ಟು ಹರಿದಾಡಿತ್ತು. ಈ ಮೂಲಕ ಅವರು ಬದುಕಿದ್ದಾರೆಂದು ಹೇಳಲಾಗಿತ್ತು. ಆದರೆ ಇವೆಲ್ಲವೂ ನಕಲಿ ಎಂಬುವುದು ಮಾತ್ರ ಸತ್ಯ

click me!