
ಬೆಳಗಾವಿ (ಡಿ.01): ನಾಗರಿಕರ ವಿರೋಧದ ನಡುವೆಯೂ ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ ಹೆಜ್ಜೆಯಿಟ್ಟಿರುವ ಸರ್ಕಾರ ಇಂದು ವಿಧಾನಪರಿಷತ್ನಲ್ಲಿ ಉತ್ತರ ನೀಡಿದೆ.
ಶಾಸಕ ಗಣೇಶ್ ಕಾರ್ಣಿಕ್ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಜೆ ಜಾರ್ಜ್, ಬೆಂಗಳೂರಿನ ಬಸವೇಶ್ವರ ಸರ್ಕಲ್ನಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆವರೆಗೆ ಉಕ್ಕಿನ ಮೇಲು ಸೇತುವೆ ನಿರ್ಮಾಣ ಮಾಡುತ್ತಿರುವುದಾಗಿ ತಿಳಿಸಿದರು.
ಈ ಫ್ಲೈಓವರ್’ನಿಂದ ವಾಹನ ದಟ್ಟಣೆ, ಟ್ರಾಫಿಕ್ ಕಿರಿ ಕಿರಿಯಿಂದ ಮುಕ್ತಿ ಸಿಗಲಿದೆ ಎಂದ ಜಾರ್ಜ್, ಯೋಜನೆಗೆ ಒಟ್ಟಾರೆ 4 ಎಕರೆ 28 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಜಾರ್ಜ್ ಹೇಳಿದ್ದಾರೆ.
ಫ್ಲೈಓವರ್ಗೆ 812 ಮರಗಳನ್ನು ಕತ್ತರಿಸಬೇಕಾಗುತ್ತದೆ. ಹಾಗೂ 24 ತಿಂಗಳಲ್ಲಿ ಯೋಜನೆ ಮುಗಿಸುತ್ತೇವೆ ಎಂದು ಜಾರ್ಜ್ ತಿಳಿಸಿದರು. ಸದ್ಯಕ್ಕೆ ಟೋಲ್ ಸಂಗ್ರಹಿಸುವ ಯಾವುದೆೇ ಯೋಚನೆ ಇಲ್ಲ ಎಂದೂ ಕೂಡಾ ಜಾರ್ಜ್ ವಿಧಾನಪರಿಷತ್ಗೆ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.