ಡೀನೋಟಿಫಿಕೇಶನ್; ಬಿಎಸ್'ವೈ ವಿರುದ್ಧ ಸರಕಾರದಿಂದ 'ರವಿವರ್ಮ' ಅಸ್ತ್ರ

Published : Aug 22, 2017, 10:05 AM ISTUpdated : Apr 11, 2018, 01:12 PM IST
ಡೀನೋಟಿಫಿಕೇಶನ್; ಬಿಎಸ್'ವೈ ವಿರುದ್ಧ ಸರಕಾರದಿಂದ 'ರವಿವರ್ಮ' ಅಸ್ತ್ರ

ಸಾರಾಂಶ

* ಡಿನೋಟಿಫಿಕೇಷನ್​ ಪ್ರಕರಣವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ ಸರ್ಕಾರ * ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಾನೂನು ತಂತ್ರಗಾರಿಕೆ * ಎಸಿಬಿ ದಾಖಲಿಸಿರುವ FIR ರದ್ದುಗೊಳಿಸಲು ಯಡಿಯೂರಪ್ಪ ಅರ್ಜಿ * ರಿಟ್​ ಅರ್ಜಿ ಪ್ರಕರಣದಲ್ಲಿ ವಾದ ಮಾಡಲು ನುರಿತ ವಕೀಲರ ನೇಮಕ * ಸಿಎಂ ಆಪ್ತ ಹಾಗೂ ಮಾಜಿ ಅಡ್ವೋಕೇಟ್​ ಜನರಲ್ ರವಿವರ್ಮಕುಮಾರ್​ ವಾದ? * ವಿಶೇಷ ಅಭಿಯೋಜಕರನ್ನಾಗಿ ನೇಮಿಸುವಂತೆ ಎಸಿಬಿ ಡಿಜಿಪಿ ಎಂ.ಎನ್.ರೆಡ್ಡಿ ಪತ್ರ

ಬೆಂಗಳೂರು(ಆ. 22): ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಷನ್​ ಪ್ರಕರಣವನ್ನು ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೆ ಅಣಿಯಾಗಿ ತಂತ್ರಗಾರಿಕೆ ಮುಂದುವರೆಸಿದೆ. ಬಿಜೆಪಿಗೆ ತಿರುಗೇಟು ನೀಡಲು ಎಲ್ಲಾ ರೀತಿಯ ಕಸರತ್ತು ಆರಂಭಿಸಿದೆ. ಎಸಿಬಿ ದಾಖಲಿಸಿರುವ ಎಫ್​ಐಆರ್ ರದ್ದುಗೊಳಿಸಲು ಬಿಎಸ್​'ವೈ ರಿಟ್​ ಅರ್ಜಿ ದಾಖಲಿಸಿದ್ದಾರೆ. ಅರ್ಜಿ ಪ್ರಕರಣದಲ್ಲಿ ಸಮರ್ಥವಾಗಿ ವಾದ ಮಾಡಲು ಸಿದ್ದರಾಮಯ್ಯ ಅವರ ನಿಕಟವರ್ತಿ ಹಾಗೂ ರಾಜ್ಯದ ಮಾಜಿ ಅಡ್ವೋಕೇಟ್​ ಜನರಲ್ ರವಿವರ್ಮಕುಮಾರ್​​​ ಅವರನ್ನ ನೇಮಿಸಲು ಚಿಂತನೆ ನಡೆಸಿದೆ. ಹೈಕೋರ್ಟ್'​ನಲ್ಲಿ ಸಮರ್ಥವಾಗಿ ವಾದ ಮಾಡಲು ರಾಜ್ಯದ ಮಾಜಿ ಅಡ್ವೋಕೇಟ್​ ಜನರಲ್​ ಪ್ರೊ.ರವಿವರ್ಮಕುಮಾರ್​ ಮತ್ತು ಸೀನಿಯರ್​ ಕೌನ್ಸಿಲ್​'ಗಳನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎಸಿಬಿ ಡಿಜಿಪಿ ಎಂ.ಎನ್.ರೆಡ್ಡಿ ಪತ್ರ ಬರೆದಿದ್ದಾರೆ. ವಿವಿಧ ಪ್ರಕರಣಗಳಲ್ಲಿ  ರಾಜ್ಯ ಸರ್ಕಾರವನ್ನು ಹಲವು ಬಾರಿ ಪ್ರತಿನಿಧಿಸಿ ಅನುಭವ, ಸಾಮರ್ಥ್ಯ ಹೊಂದಿರುವ ಪ್ರೊ.ರವಿವರ್ಮಕುಮಾರ್​ ಅವರನ್ನೇ ಯಡಿರಪ್ಪ ಅವರ ಪ್ರಕರಣದಲ್ಲಿ ವಾದ ಮಂಡಿಸಲು ನೇಮಿಸುವ ಸಾಧ್ಯತೆಗಳಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!