
ಬೆಂಗಳೂರು (ಜೂ.24): ಭಾಗ್ಯಗಳಿಗೆ ಹೆಸರಾದ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ವಿದೇಶಿ ಪ್ರವಾಸದ ಭಾಗ್ಯವನ್ನ ನೀಡಲು ಹೊರಟಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಭಾಗ್ಯಗಳನ್ನ ಕರುಣಿಸುತ್ತಲೇ ಇದೆ. ಸರ್ಕಾರ ತಂದ ಭಾಗ್ಯಗಳು ಎಷ್ಟು ಜನರನ್ನ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ. ಸರ್ಕಾರವೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಯಥಾಪ್ರಕಾರ ತನ್ನ ಭಾಗ್ಯಗಳ ಸರಣಿಯನ್ನ ಮುಂದುವರೆಸಿದೆ.
ಜುಲೈ ತಿಂಗಳಲ್ಲಿ ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸದ ಭಾಗ್ಯ
ಪೌರ ಕಾರ್ಮಿಕರ ಪ್ರವಾಸದ ಬಗ್ಗೆ ಮಾಹಿತಿ ನೀಡಿದ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ, ಜುಲೈ ತಿಂಗಳಲ್ಲಿ ಹತ್ತು ಸಾವಿರ ಪೌರ ಕಾರ್ಮಿಕರು ಸಿಂಗಾಪುರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಮ್ಯಾನ ಹೋಲ್ ಸ್ವಚ್ಛತೆ ಬಗ್ಗೆ ಪೌರ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕಿದೆ. ಈ ಕುರಿತು ಅಧ್ಯಯನ ಮಾಡಲು ಪ್ರವಾಸ ಹೊರಡಲಿದ್ದಾರೆ. ವಿದೇಶಕ್ಕೆ ತೆರಳಲಿರುವ ಪೌರ ಕಾರ್ಮಿಕರ ಆಯ್ಕೆ ನಿರ್ಧಾರವನ್ನ ಆಯಾ ಪುರಸಭೆಗಳಿಗೆ ಬಿಡಲಾಗಿದ್ದು, ಅವರ ತೀರ್ಮಾನವೇ ಅಂತಿಮ ಎಂದು ಆಂಜನೇಯ ಹೇಳಿದ್ದಾರೆ. ಪ್ರವಾಸದ ಒಟ್ಟು ಖರ್ಚು ಹತ್ತು ಕೋಟಿ ರೂ. ಎಂದಿದ್ದಾರೆ.
ಕೊಳಚೆ ಗುಂಡಿ ಅಧ್ಯಯನಕ್ಕಾಗಿ ಹತ್ತು ಸಾವಿರ ಪೌರ ಕಾರ್ಮಿಕರು ವಿದೇಶಕ್ಕೆ ಹೋಗುವ ಅವಶ್ಯಕತೆ ಇದೆಯೇ, ಕೆಲ ಅಧಿಕಾರಿಗಳನ್ನು ಕಳುಹಿಸಬಹುದಿತ್ತು. ಬಳಿಕ ಅಧಿಕಾರಿಗಳ ಮೂಲಕ ಪೌರ ಕಾರ್ಮಿಕರಲ್ಲಿ ಅರಿವು ಮೂಡಿಸಬಹುದಿತ್ತು. ಅದರ ಬದಲಾಗಿ ಪ್ರವಾಸದ ನೆಪದಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿರುವುದು ಎಷ್ಟು ಸರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.