ಬ್ಲೂ ವೇಲ್ ವಿರುದ್ಧ ರಾಜ್ಯ ಸರ್ಕಾರದಿಂದ ಜಾಗೃತಿ

By Suvarna Web DeskFirst Published Aug 20, 2017, 9:40 AM IST
Highlights

‘ಬ್ಲೂವೇಲ್ ಚಾಲೆಂಜ್’ ಎಂಬ ಅಂತರ್ಜಾಲ ಕ್ರೀಡೆಯಿಂದ ಆಗುವ ಅನಾಹುತಗಳ ಬಗ್ಗೆ ಪ್ರಚಾರಾಂದೋಲನ ನಡೆಸಿ ಶಾಲಾ-ಕಾಲೇಜು ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ

ಬೆಂಗಳೂರು(ಆ.20): ‘ಬ್ಲೂವೇಲ್ ಚಾಲೆಂಜ್’ ಎಂಬ ಅಂತರ್ಜಾಲ ಕ್ರೀಡೆಯಿಂದ ಆಗುವ ಅನಾಹುತಗಳ ಬಗ್ಗೆ ಪ್ರಚಾರಾಂದೋಲನ ನಡೆಸಿ ಶಾಲಾ-ಕಾಲೇಜು ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಚಾರ ಆಂದೋಲನ ರೂಪಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಇಲಾಖೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಬ್ಲೂವೇಲ್ ಕ್ರೀಡೆಯಿಂದ ಪ್ರಭಾವಿತರಾಗಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಚಿಂತಿಸಬೇಕಾದ ಸಂಗತಿಯಾಗಿದೆ. ಈ ಕ್ರೀಡೆಯು ಸುಲಭವಾಗಿ ಮಕ್ಕಳಿಗೆ ಸಿಗುವಂತಿದೆ. ಎಳೆಯ ಮನಸ್ಸುಗಳನ್ನು ಆಟದ ನೆಪದಲ್ಲಿ ಸಾವಿಗೆ ದೂಡುವ ಅಥವಾ ಪ್ರೇರಣೆ ನೀಡುವ ಇಂತಹ ಆಟಗಳು ಅತ್ಯಂತ ಅಪಾಯಕಾರಿ. ಅಂತರ್ಜಾಲ ಆಟಗಳು ಮತ್ತು ವೆಬ್‌ಸೈಟ್‌ಗಳ ಬಳಕೆ ಬಗ್ಗೆ ಮಕ್ಕಳು ಮತ್ತು ಪೋಷಕರಲ್ಲಿ ವಿಶೇಷ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಲಿದ್ದಾರೆ.

 

click me!