
ಹೈದರಾಬಾದ್(ಜು.12): ವಿವಾದಗಳಲ್ಲೇ ಹೆಚ್ಚು ಖ್ಯಾತಿ ಗಳಿಸಿರುವ ಟಾಲಿವುಡ್ ನಟಿ ಶ್ರೀರೆಡ್ಡಿ ಈಗ ತಮ್ಮ ತಮಿಳು ನಿರ್ದೇಶಕ ಎ.ಆರ್.ಮುರುಗದಾಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ.
ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು, ಹಿಂದೆ ನಡೆದಿರುವ ಘಟನೆಯನ್ನು ವಿವರಿಸಿದ್ದು ನಮಸ್ಕಾರ ತಮಿಳು ಡೈರೆಕ್ಟರ್ ಮುರುಗದಾಸ್ ಜೀ.... ಹೇಗಿದ್ದೀರಾ ? ಗ್ರೀನ್ ಪಾರ್ಕ್ ಹೋಟೆಲ್ ನಿಮಗೆ ನೆನಪಿದೆಯಾ.? ವೇಲಗೊಂಡ ಶ್ರೀನಿವಾಸ್ ಅವರ ಮೂಲಕ ನಾವು ಭೇಟಿ ಮಾಡಿದ್ದೆವು. ನೀವು ನನಗೆ ಪಾತ್ರ ನೀಡುವುದಾಗಿ ಮಾತು ಕೊಟ್ಟಿದ್ರಿ. ಆದರೆ, ನಮ್ಮಿಬ್ಬರ ನಡುವೆ ಜಾಸ್ತಿ......... ಎಂದು ಮಾತನ್ನು ಸಾಲನ್ನು ನಿಲ್ಲಿಸಿ ಇದುವರೆಗೂ ನೀವು ನನಗೆ ಯಾವುದೇ ಆಫರ್ ಮಾಡಲಿಲ್ಲ.'' ಎಂದು ಬರೆದುಕೊಂಡಿದ್ದಾರೆ.
ಮಧ್ಯದಲ್ಲಿ 'ನಮ್ಮಿಬ್ಬರ ನಡುವೆ ಜಾಸ್ತಿ ---' ಪದವನ್ನು ಅರ್ಧದಲ್ಲೇ ನಿಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊನೆಯದಾಗಿ 'ನೀವು ಕೂಡ ಗ್ರೇಟ್ ಪರ್ಸನ್ ಸರ್' ಎಂದು ತಮ್ಮ ಮಾತನ್ನು ಮುಗಿಸಿದ್ದಾರೆ. ಕೆಲವು ತಿಂಗಳ ಹಿಂದೆ ತೆಲುಗು ಚಿತ್ರೋದ್ಯಮದ ಮುಂದೆ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು. ಈ ಘಟನೆ ನಡದು ಕೆಲವು ದಿನಗಳ ನಂತರ ನಟ ರಾಣ ದಗ್ಗುಬಟ್ಟಿ ಅವರ ಸಹೋದರ ರಾಣ ಅಭಿಷೇಕ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ತಮಿಳಿನ ಖ್ಯಾತ ನಿರ್ದೇಶಕರಾಗಿರುವ ಮುರುಗದಾಸ್ ಘಜನಿ,ಸ್ಟಾಲಿನ್, ಕತ್ತಿ, ತುಪಾಕಿ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.