2 ವರ್ಷದ ಪುಟಾಣಿ ಕಾಡಾನೆ ಬಾಲಾಜಿ ಇನ್ನಿಲ್ಲ!

Published : Jul 12, 2018, 02:57 PM IST
2 ವರ್ಷದ ಪುಟಾಣಿ ಕಾಡಾನೆ ಬಾಲಾಜಿ ಇನ್ನಿಲ್ಲ!

ಸಾರಾಂಶ

ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಸೂತಕ 2 ವರ್ಷದ ಮರಿ ಕಾಡಾನೆ ಬಾಲಾಜಿ ಸಾವು ತುಂಗಾ ನದಿ ಹಿನ್ನೀರಿನಲ್ಲಿ ಸೆರೆ ಸಿಕ್ಕಿದ ಮರಿ ಕಾಡಾನೆ ಅನಾರೋಗ್ಯದ ಹಿನ್ನೆಲೆಯಲ್ಲಿ ಇಹಲೋಕ ತ್ಯಜಿಸಿದ ಬಾಲಾಜಿ ಸಕ್ರೆಬೈಲು ಆನೆ ಬಿಡಾರದಲ್ಲಿ ಬಾಲಾಜಿ ಅಂತ್ಯಕ್ರೀಯೆ

ಶಿವಮೊಗ್ಗ(ಜು.12): ಇಲ್ಲಿನ ಸಕ್ರೆಬೈಲು ಆನೆ ಬಿಡಾರದಲ್ಲಿ 2 ವರ್ಷದ ಕಾಡಾನೆ ಮರಿಯೊಂದು ಅನಾರೋಗ್ಯದಿಂದ ಸಾವನ್ನಪ್ಪಿದೆ. ಕಳೆದ 6 ತಿಂಗಳ ಹಿಂದೆ ತುಂಗಾ ನದಿಯ ಹಿನ್ನೀರಿನಲ್ಲಿ ಈ ಮರಿ ಕಾಡಾನೆ ಸೆರೆ ಸಿಕ್ಕಿತ್ತು.

ಸೆರೆ ಸಿಕ್ಕ ಮರಿ ಕಾಡಾನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದು ಆರೈಕೆ ಮಾಡಲಾಗಿತ್ತು. ಅಲ್ಲದೇ ಈ ಮರಿ ಕಾಡಾನೆಗೆ ಬಾಲಾಜಿ ಎಂದು ನಾಮಕರಣ ಕೂಡ ಮಾಡಲಾಗಿತ್ತು. ಆದರೆ ಸಕ್ರೆಬೈಲು ಆನೆ ಬಿಡಾರಕ್ಕೆ ಬಂದ ದಿನದಿಂದ ಈ ಮರಿ ಕಾಡಾನೆಗೆ ತೀವ್ರ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು ಎನ್ನಲಾಗಿದ್ದು, ಬಾಲಾಜಿ ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಾಜಿ ನಿಧನದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ವಿಭಾಗದ ಅಧಿಕಾರಿಗಳು, ಆನೆ ಬಿಡಾರದ ಮಾವುತರು, ಕಾವಾಡಿಗಳು ಸೇರಿ ಮೃತ ಆನೆ ಮರಿಯ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಈ ವೇಳೆ ಕಳೆದ ೬ ತಿಂಗಳಿನಿಂದ ಬಾಲಾಜಿ ಆರೈಕೆ ಮಾಡುತ್ತಿದ್ದ ಮಾವುತರ ಕಣ್ಣಾಲಿ ಗಳು ಒದ್ದೆಯಾಗಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸತತ 5ನೇ ಬಾರಿಗೆ iPhone ಕಳೆದುಕೊಂಡ ಭಾರತೀಯ ಮಹಿಳೆ, ಮತ್ತೆ ಮತ್ತೆ ಫೋನ್ ಹುಡುಕಿಕೊಂಡ ಸಿಕ್ರೇಟ್ ರಿವೀಲ್
100 ವರ್ಷಗಳಲ್ಲಿ ಇದೇ ಮೊದಲು, ಚಿರತೆಯಂತಹ ಹೊಸ ಬೆಕ್ಕಿನ ಪ್ರಭೇದ ಪತ್ತೆ; DNA ಪರೀಕ್ಷೆಯಲ್ಲಿ ಶಾಕಿಂಗ್ ಸಂಗತಿ ರಿವೀಲ್