ಭಾರತೀಯ ಯೋಧರು ಪಾಕ್ ಸಿಹಿ ನಿರಾಕರಿಸಿದ್ದು ಯಾಕೆ?

By Web DeskFirst Published Jun 16, 2018, 2:08 PM IST
Highlights

ದೀಪಾವಳಿ ಮತ್ತು ರಂಜಾನ್  ಹಬ್ಬಗಳ ಸಂದರ್ಭ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಸಿಹಿ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಪದ್ಧತಿ. ಆದರೆ ಈ ಸಾರಿ ಪಾಕಿಸ್ತಾನ ಸೈನಿಕರು ನೀಡಿದ ಸಿಹಿಯನ್ನು ಭಾರತೀಯ ಯೋಧರು ಸ್ವೀಕರಿಸಿಲ್ಲ. ಯಾಕೆ ಕಾರಣ ಇಲ್ಲಿದೆ.

ಶ್ರೀನಗರ ಜೂನ್ 16: ದೀಪಾವಳಿ ಮತ್ತು ರಂಜಾನ್  ಹಬ್ಬಗಳ ಸಂದರ್ಭ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಸಿಹಿ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಪದ್ಧತಿ. ಆದರೆ ಈ ಸಾರಿ ಪಾಕಿಸ್ತಾನ ಸೈನಿಕರು ನೀಡಿದ ಸಿಹಿಯನ್ನು ಭಾರತೀಯ ಯೋಧರು ಸ್ವೀಕರಿಸಿಲ್ಲ.

ಹೌದು ..ಪಾಕಿಸ್ತಾನ ಸೈನಿಕರು ಪದೆ ಪದೆ ಕದನ ವಿರಾಮ ಉಲ್ಲಂಘನೆ ಮಾಡಿತ್ತಿರುವುದರಿಂದ  ಸಿಹಿಯನ್ನು  ಭದ್ರತಾ ಪಡೆಯ ಸಿಬ್ಬಂದಿ ನಿರಾಕರಿಸಿದ್ದಾರೆ. ಕದನ ವಿರಾಮ ಉಲ್ಲಂಘಿಸಿದ್ದ ಪಾಕ್ ಕೆಲ ದಿನಗಳ ಹಿಂದೆ ಸಾಂಬಾ ಗಡಿಯಲ್ಲಿ ಭದ್ರತಾ ಪಡೆಯ ನಾಲ್ವರು ಸಿಬ್ಬಂದಿಯನ್ನು ಹತ್ಯೆಗೈದಿದ್ದರು. 

ಗಣರಾಜ್ಯೋತ್ಸವ ಸಂದರ್ಭದಲ್ಲಿ ಅತ್ತಾರಿ-ವಾಘಾ ಗಡಿಯಲ್ಲಿ ಪರೇಡ್ ನಡೆಯುತ್ತದೆ.ಇನ್ನೊಂದು ಕಡೆ ಗಡಿಯಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು ರಜೆಗೆಂದು ಮನೆಗೆ ತೆರಳುತ್ತಿದ್ದ ಯೋಧ ಔರಂಗಜೇಬ್ ಎಂಬುವರನ್ನು ಅಪಹರಣ ಮಾಡಿ ನಂತರ ಗುಂಡಿಟ್ಟು ಹತ್ಯೆ ಮಾಡಿದ್ದರು. 

click me!