
ಮುಂಬೈ : ಭಾರತದ ಅತ್ಯಂತ ಪ್ರಸಿದ್ಧ ನಟಿ ಸೂಪರ್ ಸ್ಟಾರಿಣಿ ಎಂದೇ ಕರೆಸಿಕೊಳ್ಳುತ್ತಿದ್ದ ಶ್ರೀ ದೇವಿ ದುಬೈಗೆ ತೆರಳಿದ್ದ ವೇಳೆ ಮೃತಪಟ್ಟು ತಮ್ಮ ಅಭಿಮಾನಿಗಳಿಗೆ ಆಘಾತವನ್ನೇ ಉಂಟು ಮಾಡಿದರು. ದುಬೈ ಹೋಟೆಲ್’ನಲ್ಲಿ ಉಳಿದುಕೊಂಡಿದ್ದ ವೇಳೆ ಅಲ್ಲಿ ಕೊನೆಯುಸಿರೆಳೆದರು. ಅಲ್ಲಿ ಅವರ ಕೊನೆಯ ಕ್ಷಣ ಹೇಗಿತ್ತು ಗೊತ್ತಾ. ಸಾಯುವ ಮುನ್ನ ತಮ್ಮ ಪತಿಯೊಂದಿಗೆ ಊಟಕ್ಕೆ ತೆರಳಲು ಸಿದ್ಧವಾಗಿದ್ದರು.
ಅದಕ್ಕೂ ಮುನ್ನ ಬಾತ್ ರೂಂಗೆ ಹೋಗಿದ್ದ ಶ್ರೀ ದೇವಿ ಸುಮಾರು 15 ನಿಮಿಷ ಕಳೆದರೂ ಕೂಡ ಹೊರಕ್ಕೆ ಬರಲಿಲ್ಲ. ಇದರಿಂದ ಆತಂಕಗೊಂಡ ಬೋನಿ ಕಪೂರ್ ಬಾಗಿಲನ್ನು ಬಡಿದಿದ್ದಾರೆ. ಅಲ್ಲಿಂದ ಯಾವುದೇ ರೀತಿಯಾದ ಪ್ರತಿಕ್ರಿಯೆ ಬಾರದಾದಾಗ ಆತಂಕಗೊಂಡ ಬೋನಿ ಕಪೂರ್ ಬಾಗಿಲನ್ನು ಒಡೆದು ಒಳಕ್ಕೆ ಹೋಗಿದ್ದಾರೆ. ಆಗ ನೀರು ತುಂಬಿದ್ದ ಬಾತ್ ಟಬ್ ಒಳಗೆ ಆಕೆ ಬಿದ್ದಿದ್ದರು. ಈ ವೇಳೆ ಬೋನಿ ಕಪೂರ್ ತಕ್ಷಣವೇ ಎಲ್ಲಿರಿಗೂ ವಿಚಾರ ತಿಳಿಸಿದ್ದಾರೆ. ಬಳಿಕ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ.
ತಕ್ಷಣವೇ ಪೊಲೀಸರು ಹಾಗೂ ವೈದ್ಯರು ಸ್ಥಳಕ್ಕೆ ಆಗಮಿಸಿ ಪರೀಕ್ಷಿಸುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.