ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಭಾರತ - ಶ್ರೀಲಂಕಾ ಟಿ20 ಪಂದ್ಯ ರದ್ದು ?

By Suvarna Web DeskFirst Published Mar 6, 2018, 3:49 PM IST
Highlights

ವಿಶೇಷ ಸಂಪುಟ ಸಭೆಯ ನಂತರ ರಾಷ್ಟ್ರದ ವಿವಿಧೆಡೆ ಗಲಭೆ ಹರಡುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರದಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ'ಎಂದು ಸರ್ಕಾದ ವಕ್ತಾರರಾದ ದಯಾಸಿರಿ ಜಯಶೇಖರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೊಲಂಬೊ(ಮಾ.06): ಬೌದ್ಧರು ಹಾಗೂ ಮುಸ್ಲಿಮರ ನಡುವಿನ ಘರ್ಷಣೆಯಿಂದಾಗಿ ಶ್ರೀಲಂಕಾದಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಹಿಂದೂ ಮಹಾಸಾಗರ ದ್ವೀಪದ ಕೇಂದ್ರೀಯ ಜಿಲ್ಲೆ ಕ್ಯಾಂಡಿಯಲ್ಲಿ ನಿನ್ನೆ ಎರಡೂ ಸಮುದಾಯಗಳ ನಡುವೆ ಗಲಭೆ ವಿಪರೀತಕ್ಕೆ ಹೋದ ಕಾರಣ ತುರ್ತು ಪರಿಸ್ಥಿತಿ ಹೇರಲಾಗಿದೆ. ಕಳೆದ ಒಂದು ವರ್ಷದಿಂದ 2 ಸಮುದಾಯಗಳ ನಡುವೆ ಆಗಾಗ ಘರ್ಷಣೆ ಸಂಭವಿಸುತ್ತಿತ್ತು ನಿನ್ನೆ ತಾರಕಕ್ಕೆ ಹೋಗಿದೆ.

ಮುಸ್ಲಿಂ ಸಮುದಾಯದವರು ಬಲವಂತವಾಗಿ ತಮ್ಮ ಸಮುದಾಯದವರನ್ನು ಮತಾಂತರ ಮಾಡುತ್ತಿದ್ದು ಬೌದ್ಧ ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ನಾಶ ಮಾಡಿದ್ದಾರೆ ಎಂದು ಕೆಲ ಬೌದ್ಧ ಸಮುದಾಯದ ಗುಂಪುಗಳು ಆರೋಪಿಸಿದ್ದು ಘರ್ಷಣೆ ಹೆಚ್ಚಾಗಲು ಕಾರಣವಾಗಿದೆ.

ವಿಶೇಷ ಸಂಪುಟ ಸಭೆಯ ನಂತರ ರಾಷ್ಟ್ರದ ವಿವಿಧೆಡೆ ಗಲಭೆ ಹರಡುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರದಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ'ಎಂದು ಸರ್ಕಾದ ವಕ್ತಾರರಾದ ದಯಾಸಿರಿ ಜಯಶೇಖರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭಾರತ-ಶ್ರೀಲಂಕಾ ಟಿ20 ಪಂದ್ಯಕ್ಕೆ ಬಿಗಿಭದ್ರತೆ

ಕೊಲಂಬೊದಲ್ಲಿ ಇಂದು ಭಾರತ - ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯ ನಡೆಯುತ್ತಿದ್ದು, ತುರ್ತುಪರಿಸ್ಥಿತಿ ಘೋಷಣೆಯ ಪರಿಣಾಮ ಕ್ರೀಡಾಂಗಣದ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿಭದ್ರತೆ ಆಯೋಜಿಸಲಾಗಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ವಿರಾಟ್ ಕೊಹ್ಲಿ, ಧೋನಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ತಂಡ ರದ್ದಾಗುವ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

click me!