
ಬೆಂಗಳೂರು (ಮಾ.06): ದೇವೇಗೌಡರು ದೆಹಲಿಗೆ ಬಂದಾಗಲೆಲ್ಲ ಚೆನ್ನಮ್ಮ ಅವರು ಕೂಡ ದೆಹಲಿಗೆ ಬರಲು ಆರಂಭಿಸಿದ್ದಾರೆ. ವರ್ಷದ ಹಿಂದೆ ಚೆನ್ನಮ್ಮನವರು ದೆಹಲಿಗೆ ಬಂದಾಗ ಸಾಫ್ದರ್ ಜಂಗ್ ರಸ್ತೆಯಲ್ಲಿರುವ ದೇವೇಗೌಡರ ನಿವಾಸದಲ್ಲಿನ ಪೂಜಾ ಕೋಣೆ ನೋಡಿ ಬೇಸರಿಸಿಕೊಂಡಿದ್ದರಂತೆ.
ದೆಹಲಿ ಮನೆಯಲ್ಲಿ ತಿಂಗಳಾನುಗಟ್ಟಲೆ ದೇವರನ್ನು ಪೂಜೆ ಮಾಡೋಲ್ಲ ಎಂದು ಚೆನ್ನಮ್ಮ ನವರು 15 ದಿನಕ್ಕೊಮ್ಮೆ ದೆಹಲಿಗೆ ಬರುತ್ತಾರೆ. ಸುಮಾರು 4 ಗಂಟೆಗಳ ಕಾಲ ಕುಳಿತು ದೇವರನ್ನೆಲ್ಲ ತೊಳೆದು ಸ್ವಚ್ಛಗೊಳಿಸಿ ಪೂಜೆ ಮಾಡುತ್ತಾರಂತೆ. ರವಿವಾರ ಮೊಮ್ಮಗನ ಮದುವೆ ಮುಗಿಸಿ ದೆಹಲಿಗೆ ಬಂದಿದ್ದ ಚೆನ್ನಮನವರು ಮಾಡುತ್ತಿದ್ದ ಪೂಜೆಯ ಬಗ್ಗೆ ಪತ್ರಕರ್ತರ ಬಳಿ ಹೇಳಿಕೊಂಡ ಗೌಡರು, ‘ನೋಡಿ ಎಲ್ಲ ಅವಳ ಪೂಜೆಯ ಭಕ್ತಿಯ ಪುಣ್ಯ’ ಎಂದು ಹೆಂಡತಿಯ ಬಗ್ಗೆ ಅಭಿಮಾನದಿಂದ ಮಾತನಾಡುತ್ತಿದ್ದರು.
ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.