
ಬೆಂಗಳೂರು : ಇಂಡಿಗೋ, ಏರ್ ಏಷಿಯಾ ಬಳಿಕ ಇದೀಗ ಸ್ಪೈಸ್ ಜೆಟ್ ಹೊಸ ಆಫರ್ ಒಂದನ್ನು ನೀಡುತ್ತಿದೆ. ನಿಮ್ಮ ವಿಮಾನ ಪ್ರಯಾಣದ ಕನಸನ್ನು ನನಸು ಮಾಡಿಕೊಳ್ಳಲು ಇದು ಬೆಸ್ಟ್ ಸಮಯವಾಗಿದೆ.
ಜುಲೈ 13ರವರೆಗೆ ಈ ಅವಕಾಶವನ್ನು ನೀಡುತ್ತಿದ್ದು, ಟಿಕೆಟ್ ದರ 999 ರಿಂದ ಆರಂಭವಾಗಿದೆ. ಮೆಗಾ ಮಾನ್ಸೂನ್ ಸೇಲ್ ಅಡಿಯಲ್ಲಿ ಈ ಆಫರ್ ಮೂಲಕ ನೀವು ಅಕ್ಟೋಬರ್ 8 ರವರೆಗೆ ಪ್ರಯಾಣಿಸಬಹುದಾಗಿದೆ.
ಇನ್ನು ಹೆಚ್ಚುವರಿಯಾಗಿ ಕೆಲ ಸೌಲಭ್ಯಗಳನ್ನೂ ಕೂಡ ನೀಡುತ್ತಿದೆ. ಈ ಆಫರ್ www.spicejet.com. ಮೂಲಕ ಬುಕ್ ಮಾಡಿದಲ್ಲಿ ಮಾತ್ರವೇ ದೊರೆಯಲಿದೆ.
ಜುಲೈ 4 ರಿಂದಲೇ ಈ ಭರ್ಜರಿ ಆಫರ್ ಗೆ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಇನ್ನು ಕೇವಲ 2 ದಿನ ಮಾತ್ರವೇ ಕಾಲಾವಕಾಶವಿದೆ. ಅಷ್ಟರಲ್ಲೇ ಟಿಕೆಟ್ ಬುಕ್ ಮಾಡುವ ಮೂಲಕ ನಿಮ್ಮ ವಿಮಾನ ಪ್ರಯಾಣದ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.