ಕೃಷ್ಣ ಜನ್ಮಾಷ್ಟಮಿ; ಇಸ್ಕಾನ್'ನಲ್ಲಿ ಎರಡು ದಿನ ವಿಶೇಷ ಸೇವೆಗಳು

By Suvarna Web DeskFirst Published Aug 14, 2017, 12:52 PM IST
Highlights

ಇಂದು ವಿಶೇಷ ಅಭಿಷೇಕ, ಮಧ್ಯರಾತ್ರಿ 12 ಕ್ಕೆ ಆರತಿ, ನೈವೇದ್ಯ ಸೇವೆ, ಪುಷ್ಪಾಂಜಲಿ ಸೇವೆ ಸೇರಿದಂತೆ ವಿಶೇಷ ಸೇವೆಗಳು ನಡೆಯಲಿವೆ. ನಾಳೆ ಮಹಾ ಅಭಿಷೇಕ, 108 ಬಗೆಯ ತಿಂಡಿಗಳ ಪ್ರದರ್ಶನ ನಡೆಯಲಿದೆ. ಮಧ್ಯರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ, ಭಕ್ತಿಗೀತೆ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಶ್ರೀ ಕೃಷ್ಣನ ವೇಷಭೂಷಣ ಧರಿಸಿ ಮಕ್ಕಳು ಸಂಭ್ರಮಿಸಲಿದ್ದಾರೆ.

ಬೆಂಗಳೂರು(ಆ. 14): ನಾಡಿನೆಲ್ಲಡೆ ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಹರೇ ರಾಮ ಹರೇ ಕೃಷ್ಣ ಮಂತ್ರ ಪಠಣದ ನಿನಾದದೊಂದಿಗೆ ಇಂದು ಇಸ್ಕಾನ್ ಆವರಣದಲ್ಲಿ ಶ್ರೀಕೃಷ್ಣನ ಹುಟ್ಟುಹಬ್ಬದ ಸಂಭ್ರಮ ಮನೆಮಾಡಲಿದೆ. ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀ ಕೃಷ್ಣನ ದೇವಾಲಯದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಜನ್ಮಾಷ್ಟಮಿ ಅಂಗವಾಗಿ ನಗರದ ಇಸ್ಕಾನ್'ನ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ಅಭಿಷೇಕ ಸೇರಿದಂತೆ ಎರಡು ದಿನಗಳ ಕಾಲ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ವಿಶೇಷ ಅಭಿಷೇಕ, ಮಧ್ಯರಾತ್ರಿ 12 ಕ್ಕೆ ಆರತಿ, ನೈವೇದ್ಯ ಸೇವೆ, ಪುಷ್ಪಾಂಜಲಿ ಸೇವೆ ಸೇರಿದಂತೆ ವಿಶೇಷ ಸೇವೆಗಳು ನಡೆಯಲಿವೆ. ನಾಳೆ ಮಹಾ ಅಭಿಷೇಕ, 108 ಬಗೆಯ ತಿಂಡಿಗಳ ಪ್ರದರ್ಶನ ನಡೆಯಲಿದೆ. ಮಧ್ಯರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ, ಭಕ್ತಿಗೀತೆ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಶ್ರೀ ಕೃಷ್ಣನ ವೇಷಭೂಷಣ ಧರಿಸಿ ಮಕ್ಕಳು ಸಂಭ್ರಮಿಸಲಿದ್ದಾರೆ.

click me!