ಕಾನೂನು ಆದಾಗ ಗರಂ: ಆ.26ರ ವರೆಗೆ ಸಿಬಿಐ ಕಸ್ಟಡಿಗೆ ಚಿದಂಬರಂ!

By Web DeskFirst Published Aug 22, 2019, 7:08 PM IST
Highlights

INX ಮಿಡಿಯಾ ಹೌಸ್ ಪ್ರಕರಣ ಹಿನ್ನೆಲೆ| ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ಕಸ್ಟಡಿಗೆ| ಸಿಬಿಐ ಕಸ್ಟಡಿಗೆ ವಹಿಸಿ ಆದೇಶ ನೀಡಿದ ಸಿಬಿಐ ವಿಶೇಷ ನ್ಯಾಯಾಲಯ| ಆ.26ರವೆರೆಗೆ ಸಿಬಿಐ ಕಸ್ಟಡಿಗೆ ಪಿ.ಚಿದಂಬರಂ| 30 ನಿಮಿಷಗಳ ಕಾಲ ಸಂಬಂಧಿಕರು ಹಾಗೂ ವಕೀಲರ ಭೇಟಿಗೆ ಸಮ್ಮತಿ|

ನವದೆಹಲಿ(ಆ.22): ಮಹತ್ವದ ಬೆಳವಣಿಗೆಯೊಂದರಲ್ಲಿ INX ಮಿಡಿಯಾ ಹೌಸ್ ಪ್ರಕರಣದಲ್ಲಿ ಬಂಧಿತರಾಗಿರುವ ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಆ.26ರವರೆಗೆ ಕಸ್ಟಡಿಗೆ ಪಡೆಯುವಲ್ಲಿ ಸಿಬಿಐ ಯಶಸ್ವಿಯಾಗಿದೆ.

INX Media Case: Special CBI Court sends former Union Finance Minister to CBI custody till August 26. pic.twitter.com/M27WmSuI8x

— ANI (@ANI)

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಮತ್ತು ಕಕ್ಷಿದಾರರ ವಾದ ಆಲಿಸಿದ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ, ಚಿದಂಬರಂ ಅವರನ್ನು 5 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ತೀರ್ಪು ನೀಡಿತು.

Court says family members and lawyers are permitted to meet for 30 minutes a day https://t.co/kXgdMn4Lwi

— ANI (@ANI)

ಇದೇ ವೇಳೆ ಕಕ್ಷಿದಾರರ ಪರ ವಾದ ಮಂಡಿಸಿದ ವಕೀಲರದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ, ಚಿದಂಬರಂ ಅವರನ್ನು ಬಿಡುಗಡೆಗೊಳಿಸುವಂತೆ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಆದರೆ ದಿನಕ್ಕೆ 30 ನಿಮಿಷಗಳ ಕಾಲ ಸಂಬಂಧಿಕರು ಹಾಗೂ ಕಕ್ಷಿದಾರ ಪರ ವಕೀಲರ ಭೇಟಿಗೆ ಸಿಬಿಐ ನ್ಯಾಯಾಲಯ ಸಮ್ಮತಿ ನೀಡಿದೆ. 

INX Media Case: Former Union Finance Minister being taken from Court after the Court sent him to CBI custody till August 26. pic.twitter.com/0XNUsBalMA

— ANI (@ANI)

ನ್ಯಾಯಾಲಯದ ತೀರ್ಪು ಹೊರ ಬೀಳುತ್ತಿದ್ದಂತೇ, ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದರು.

click me!