ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮೇಲೆ ಸ್ಪೀಕರ್ ಸಿಟ್ಟಾಗಿದ್ದೇಕೆ?

Published : Jun 06, 2018, 08:17 PM IST
ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮೇಲೆ ಸ್ಪೀಕರ್ ಸಿಟ್ಟಾಗಿದ್ದೇಕೆ?

ಸಾರಾಂಶ

ಟ್ರಾಫಿಕ್ ಸಮಸ್ಯೆಯಿಂದ ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಗೈರಾದ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಪತ್ರ ಬರೆದ ಸ್ಪೀಕರ್ ರಾಜಭವನದ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ ರಮೇಶ್ ಕುಮಾರ್

ಬೆಂಗಳೂರು(ಜೂ.6): ರಾಜಭವನ ಸುತ್ತ ಟ್ರಾಫಿಕ್ ಜಾಮ್ ಆಗಿದ್ದರಿಂದ ಕಾಂಗ್ರೆಸ್‌ - ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿಧಾನಸಭೆ ಸ್ಪೀಕರ್ ರಮೇಶ್‌ ಕುಮಾರ್‌ ಗೈರಾದ ಘಟನೆ ನಡೆದಿದೆ. 

ಈ ಹಿನ್ನೆಲೆಯಲ್ಲಿ ರಮೇಶ್‌ ಕುಮಾರ್‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಟ್ರಾಫಿಕ್ ಜಾಮ್ ಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ರಮೇಶ್ ಕುಮಾರ್, ರಾಜಭವನಕ್ಕೆ ಬಂದು ಅರ್ಧ ಗಂಟೆ ಕಾದರೂ ಸಮಾರಂಭಕ್ಕೆ ಆಗಮಿಸಲು ಅವಕಾಶ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮುಖ್ಯ ಕಾರ್ಯದರ್ಶಿಯವರ ಅಕ್ಷಮ್ಯ ಅಪರಾಧಕ್ಕೆ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೇನೆ ಎಂದು ರಮೇಶ್‌ ಕುಮಾರ್‌ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ ರಾಜಭವನದ ಅಧಿಕಾರಿಗಳ ದುರಂಹಕಾರ, ಅಜ್ಞಾನದಿಂದಾಗಿ ಸಮಾರಂಭಕ್ಕೆ ಹಾಜರಾಗಲು ಆಗಲಿಲ್ಲ ಎಂದು ರಮೇಶ್‌ ಕುಮಾರ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

1971ರ ಯುದ್ಧದಲ್ಲಿ ಭಾರತ ಮುಳುಗಿಸಿದ್ದ ಪಿಎನ್‌ಎಸ್‌ ಘಾಜಿ ಸಬ್‌ಮರೀನ್‌ ನೌಕೆ ಪುನಃ ಪಡೆದ ಪಾಕಿಸ್ತಾನ
ರಾಮನಗರದಲ್ಲಿದೆ ವಾರಸುದಾರರಿಲ್ಲದ 48.69 ಕೋಟಿ ರು! ಹಣ ವಾಪಸ್ ಹಿಂದಿರುಗಿಸಲು ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನ