ಅತೃಪ್ತರೆಲ್ಲಾ ಈಗ ತೃಪ್ತರಾದರು : ರಮೇಶ್ ಕುಮಾರ್ ಅಸಮಾಧಾನ

By Web DeskFirst Published Jul 24, 2019, 1:20 PM IST
Highlights

ರಾಜ್ಯ ರಾಜಕೀಯದಲ್ಲಿ ನಡೆದ ಪ್ರಹಸನ ಕೊನೆಯಾಗಿದೆ. ಇತ್ತ ದೋಸ್ತಿ ಪಡೆ ಅಧಿಕಾರದಿಂದ ಇಳಿದರೆ, ಅತ್ತ ಬಿಜಪಿ ಪಾಳಯದ ಅಧಿಕಾರಕ್ಕೆ ಏರಲು ಸಿದ್ಧವಾಗಿದೆ. ಈ ಎಲ್ಲಾ ಹೈಡ್ರಾಮಾಗೆ ಕಾರಣವಾದ ರೆಬೆಲ್ ನಾಯಕರ ವಿರುದ್ಧ ಈಗ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು [ಜು.24]: ರಾಜ್ಯ ರಾಜಕೀಯದಲ್ಲಿ ಎಲ್ಲವೂ ಮುಗಿದಿದೆ. ಅತೃಪ್ತರಾದವರೆಲ್ಲಾ ತೃಪ್ತರಾಗಿದ್ದಾರೆ ಎಂದು ಪರೋಕ್ಷವಾಗಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವಿಶ್ವಾಸಮತ ಯಾಚನೆ ಮೂಲಕ ಕಳೆದ ಕೆಲದಿನಗಳಿಂದ ನಡೆಯುತ್ತಿರುವ ರಾಜ್ಯ ರಾಜಕೀಯ ಪ್ರಹಸನ ರಾಜ್ಯದಲ್ಲಿ ಮುಕ್ತಾಯವಾದ ಬೆನ್ನಲ್ಲೇ ಕೈ ಕೊಟ್ಟು ಹೋದ ಶಾಸಕರ ಬಗ್ಗೆ ಕಿಡಿಕಾರಿದ್ದಾರೆ. 

ರಾಜ್ಯ ರಾಜಕೀಯದ ಇಂಟರೆಸ್ಟಿಂಗ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾನೂನುಗಳು ಕೇವಲ ಪುಸ್ತಕದಲ್ಲಿದ್ದರೇ ಸಾಲದು. ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಅದರರಂತೆ ಮುಂದಿನ ಕಾರ್ಯಗಳೆಲ್ಲಾ ಕಾನೂನು ರೀತಿಯಾಗಿಯೇ ನಡೆಯಲಿದೆ ಎಂದು ರಮೇಶ್ ಕುಮಾರ್ ಹೇಳಿದರು. 

ರಾಜೀನಾಮೆ ನೀಡಿದವರ ಬಗ್ಗೆ  ಅಂತಿಮವಾಗಿ ರಾಜ್ಯಪಾಲರು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪೀಕರ್ ಹೇಳಿದರು.

click me!