ಬಾಹ್ಯಾಕಾಶ ಯಾತ್ರೆಯಿಂದ ಆಯಸ್ಸು ವೃದ್ಧಿ?

Published : Feb 04, 2017, 06:43 PM ISTUpdated : Apr 11, 2018, 12:48 PM IST
ಬಾಹ್ಯಾಕಾಶ ಯಾತ್ರೆಯಿಂದ ಆಯಸ್ಸು ವೃದ್ಧಿ?

ಸಾರಾಂಶ

ಅವರಲ್ಲಿ ಅವರ ಸೋದರ ಮಾರ್ಕ್ ಕೆಲ್ಲಿ ಭೂಮಿಯಲ್ಲೇ ಇದ್ದರು. ಹೀಗಾಗಿ, ಇವರಿಬ್ಬರ ಮೇಲೆ ಅಧ್ಯಯನ ನಡೆಸಲಾಯಿತು. ಕ್ರೋಮೋಸೋಮ್‌ಗಳ ತುದಿಯ(ಡಿಎನ್‌ಎ ಇರುವ ಕೋಶದಲ್ಲಿನ ಸಣ್ಣ ಚೀಲಗಳು) ವರ್ತನೆಯೇ ವಯಸ್ಸಾಗುತ್ತಿರುವುದರ ಮೂಲ ಸೂಚಕವಾಗಿರುತ್ತದೆ. ಈ ತುದಿಗಳನ್ನು ಟೆಲೋಮಿಯರ್ಸ್ ಎನ್ನುತ್ತಾರೆ. ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಈ ಟೆಲೋಮಿಯರ್ಸ್‌ಗಳು ಸಂಕುಚಿತಗೊಳ್ಳುತ್ತಾ ಸಾಗುತ್ತದೆ

ನವದೆಹಲಿ(ಫೆ.05): ಬಾಹ್ಯಾಕಾಶ ಪಯಣವು ಆಯಸ್ಸನ್ನು ಹೆಚ್ಚಿಸುವುದೇ? ವಯಸ್ಸಾಗುವ ಪ್ರಮಾಣವು ತಗ್ಗುವುದೇ?

ಹೌದು ಎನ್ನುತ್ತದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸಿದ ಅಧ್ಯಯನ. ಗಗನಯಾತ್ರಿ ಸ್ಕಾಟ್ ಕೆಲ್ಲಿ ಅವರ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಶೂನ್ಯ ಗುರುತ್ವದ ವಲಯದಲ್ಲಿ ವ್ಯಕ್ತಿಗೆ ಬೇಗನೆ ವಯಸ್ಸಾಗುತ್ತದೆ ಎಂಬ ಹಿಂದಿನ ಎಲ್ಲ ಕಲ್ಪನೆಗಳನ್ನೂ ಈ ಅಧ್ಯಯನ ತಳ್ಳಿಹಾಕಿದೆ.

ಅವಳಿ ಸಹೋದರರಾದ ಸ್ಕಾಟ್ ಕೆಲ್ಲಿ ಮತ್ತು ಮಾರ್ಕ್ ಕೆಲ್ಲಿ ಮೇಲೆ ನಡೆಸಲಾದ ಅಧ್ಯಯನದ ಪ್ರಾಥಮಿಕ ವರದಿಯನ್ನು ನಾಸಾ ಬಿಡುಗಡೆಗೊಳಿಸಿದೆ. ಸ್ಕಾಟ್ ಕೆಲ್ಲಿ ಒಂದು ವರ್ಷ ಕಾಲ ಗಗನಯಾತ್ರೆ ಕೈಗೊಂಡಿದ್ದರು.  ಅವರಲ್ಲಿ ಅವರ ಸೋದರ ಮಾರ್ಕ್ ಕೆಲ್ಲಿ ಭೂಮಿಯಲ್ಲೇ ಇದ್ದರು. ಹೀಗಾಗಿ, ಇವರಿಬ್ಬರ ಮೇಲೆ ಅಧ್ಯಯನ ನಡೆಸಲಾಯಿತು. ಕ್ರೋಮೋಸೋಮ್‌ಗಳ ತುದಿಯ(ಡಿಎನ್‌ಎ ಇರುವ ಕೋಶದಲ್ಲಿನ ಸಣ್ಣ ಚೀಲಗಳು) ವರ್ತನೆಯೇ ವಯಸ್ಸಾಗುತ್ತಿರುವುದರ ಮೂಲ ಸೂಚಕವಾಗಿರುತ್ತದೆ. ಈ ತುದಿಗಳನ್ನು ಟೆಲೋಮಿಯರ್ಸ್ ಎನ್ನುತ್ತಾರೆ. ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಈ ಟೆಲೋಮಿಯರ್ಸ್‌ಗಳು ಸಂಕುಚಿತಗೊಳ್ಳುತ್ತಾ ಸಾಗುತ್ತದೆ. ಆದರೆ, 382 ದಿನ ಬಾಹ್ಯಾಕಾಶದಲ್ಲಿದ್ದ ಸ್ಕಾಟ್ ಕೆಲ್ಲಿ ಅವರ ಟೆಲೋಮಿಯರ್ಸ್ ಸಂಕುಚಿತಗೊಳ್ಳುವ ಬದಲು, ಇನ್ನಷ್ಟು ಉದ್ದವಾಗುತ್ತಾ ಸಾಗಿದೆ. ಆದರೆ, ಅವರು ಭೂಮಿಗೆ ಮರಳಿದ ಬಳಿಕ ಅದು ಸಂಕುಚಿತಗೊಳ್ಳಲು ಆರಂಭಿಸಿದೆ.

ಕೆಲ್ಲಿ ಅವರು ಬಾಹ್ಯಾಕಾಶದಲ್ಲಿ ಕಡಿಮೆ ಕ್ಯಾಲೊರಿಯ ಆಹಾರ ಸೇವಿಸುತ್ತಿದ್ದುದು ಹಾಗೂ ಹೆಚ್ಚೆಚ್ಚು ವ್ಯಾಯಾಮ ಮಾಡುತ್ತಿದ್ದುದೂ ಇದಕ್ಕೆ ಕಾರಣವಿರಬಹುದು ಎಂದಿದ್ದಾರೆ ವಿಜ್ಞಾನಿಗಳು. ಇನ್ನಷ್ಟು ಅಧ್ಯಯನದ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಬಲ್ಲದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ