ಇಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ದಂಡ ತೆರಬೇಕಾದೀತು ಜೋಕೆ!

First Published Jun 24, 2018, 2:58 PM IST
Highlights

ಸೆಲ್ಫಿ ಸ್ಪೆಷಲಿಸ್ಟ್ ಮೊಬೈಲ್ ಇದೆ ಎಂದು ಕಂಡಕಂಡಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರೆ ಅಷ್ಟೆ. ಇನ್ನು ಮುಂದೆ ಜೇಬಿನಿಂದ ದಂಡ ಎಂದು ಮೊಬೈಲ್ ಗೆ ಕೊಟ್ಟ ಅರ್ಧ ಹಣವನ್ನು ತೆರಬೇಕಾದೀತು ಜೋಕೆ.!

ಕೊಯಮತ್ತೂರು(ಜೂ.24) ಸೆಲ್ಫಿ ಸ್ಪೆಷಲಿಸ್ಟ್ ಮೊಬೈಲ್ ಇದೆ ಎಂದು ಕಂಡಕಂಡಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರೆ ಅಷ್ಟೆ. ಇನ್ನು ಮುಂದೆ ಜೇಬಿನಿಂದ ದಂಡ ಎಂದು ಮೊಬೈಲ್ ಗೆ ಕೊಟ್ಟ ಅರ್ಧ ಹಣವನ್ನು ತೆರಬೇಕಾದೀತು ಜೋಕೆ.!

ಅಪಪಘಾತಗಳನ್ನು ತಪ್ಪಿಸಲು ದಕ್ಷಿಣ ವಿಭಾಗೀಯ ರೈಲ್ವೆ ಮಹತ್ವದ ನಿರ್ಧಾರ ಮಾಡಿದ್ದು ರೈಲ್ವೆ ಫುಟ್  ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗುವವರಿಂದ 2000 ರೂ. ದಂಡ ವಸೂಲಿಗೆ ಮುಂದಾಗಿದೆ. ಒಂದು ಸಾರಿ ದಂಡಕ್ಕೆ ಗುರಿಯಾದವ ಅಂದರೆ ತಪ್ಪು ಮಾಡಿದವ ಮತ್ತೆ ತಪ್ಪು ಮಾಡಿದರೆ ಆರು ತಿಂಗಳ ಸಜೆ ವಿಧಿಸಲು ತೀರ್ಮಾನ ಮಾಡಲಾಗಿದೆ. ಕೊಯಮತ್ತೂರು ನಿಲ್ದಾಣದಲ್ಲಿ ನಿಯಮವನ್ನು ಈಗಾಗಲೇ ಜಾರಿಗೆ ತರಲಾಗಿದೆ.

ಯುವಕನಿಂದ ಸೆಲ್ಫಿ ಆತ್ಮಹತ್ಯೆಗೆ ಯತ್ನ..!

ರೈಲ್ವೆ ನಿಲ್ದಾಣಕ್ಕೆ ರೈಲು ಆಗಮಿಸುವ ವೇಳೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಅವಘಡಡಗಳು ಹೆಚ್ಚುತ್ತಿರುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಳಿದ ವಿಭಾಗಗಳಿಗೂ ನೋ ಸೆಲ್ಫಿ ಕಾನೂನು ವಿಸ್ತರಿಸುವ ಚಿಂತನೆಯಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.(ಸಾಂದರ್ಭಿಕ ಚಿತ್ರ)

click me!