ನೋಟ್ ಬ್ಯಾನ್: ನೀವು ಬಳಸಿದ ನೋಟುಗಳು ಇನ್ಮುಂದೆ ಈ ದೇಶ ಬಳಸುತ್ತಾರೆ..!

By Suvarna Web DeskFirst Published Nov 9, 2017, 2:06 PM IST
Highlights

ಈ ಸಂಬಂಧ ಆರ್'ಬಿಐ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಆ ಪ್ರಕಾರ ನೋಟುಗಳನ್ನು ಹಾರ್ಡ್'ಬೋರ್ಡ್'ಗಳನ್ನಾಗಿ ದಕ್ಷಿಣ ಆಫ್ರಿಕಾದಲ್ಲಿ ಬಳಸಲಾಗುತ್ತದೆ.

ಬೆಂಗಳೂರು(ನ.09): ನೋಟ್ ಬ್ಯಾನ್ ಆಗಿ ಒಂದು ವರ್ಷವಾಯ್ತು. ಕಳೆದ ನವೆಂವರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ಮುಖಬೆಲೆಯ ಚಲಾವಣೆಯನ್ನು ಅಮಾನ್ಯ ಮಾಡಿ ಆದೇಶ ಹೊರಡಿಸಿದ್ದು ನಮಗೆಲ್ಲ ಗೊತ್ತೆಯಿದೆ. ಆದರೆ ಈ ರದ್ದಿಯಾದ ಹಳೆಯ ನೋಟುಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಬಳಸಲಾಗುತ್ತಿದೆ. ಆದರೆ ನೋಟಿನ ರೂಪದಲ್ಲಿ ಅಲ್ಲ, ಬದಲಾಗಿ ರಟ್ಟಿನ ರೂಪದಲ್ಲಿ ಬಳಸಲಾಗುತ್ತದೆಯಂತೆ.

ಈ ಸಂಬಂಧ ಆರ್'ಬಿಐ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಆ ಪ್ರಕಾರ ನೋಟುಗಳನ್ನು ಹಾರ್ಡ್'ಬೋರ್ಡ್'ಗಳನ್ನಾಗಿ ದಕ್ಷಿಣ ಆಫ್ರಿಕಾದಲ್ಲಿ ಬಳಸಲಾಗುತ್ತದೆ.

Latest Videos

ದಕ್ಷಿಣ ಆಫ್ರಿಕಾದಲ್ಲಿ ಬಳಕೆಯಾಗುತ್ತದೆ ಹಳೆಯ ನೋಟುಗಳು:

ಮಾಧ್ಯಮಗಳ ವರದಿಯೊಂದರ ಪ್ರಕಾರ, ಈಗಾಗಲೇ ಹಳೆಯ ನೋಟುಗಳ ಉಪಯೋಗದ ಬಗ್ಗೆ ಆರ್'ಬಿಐ ಹಾಗೂ ವೆಸ್ಟರ್ನ್ ಇಂಡಿಯಾ ಫ್ಲೈವುಡ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಂಪನಿಯು ಈ ನೋಟುಗಳನ್ನು ಹಾರ್ಡ್'ಬೋರ್ಡ್'ಗಳನ್ನಾಗಿ ಮಾಡುತ್ತಿದ್ದು, ಇವನ್ನು ಜಾಹಿರಾತು ಫಲಕ(ಹೋರ್ಡಿಂಗ್ಸ್)ಗಳು ಹಾಗೂ ಫ್ಲೆಕ್ಸ್'ಗಳ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಇನ್ನೊಂದು ಮುಖ್ಯ ವಿಷಯವೆಂದರೆ, ವೆಸ್ಟರ್ನ್ ಇಂಡಿಯಾದ ಪ್ಲೈವುಡ್ ಕಂಪನಿಯ ಕೇಂದ್ರ ಕಚೇರಿ ಕೇರಳದಲ್ಲಿದೆ.

ರದ್ದಿ ಬೆಲೆಗೆ ಮಾರಾಟವಾದ ಕೋಟಿ ರುಪಾಯಿ ನೋಟುಗಳು

ಈ ಹಳೆಯ ನೋಟುಗಳನ್ನು ಪುನರ್ಬಳಕೆ ಮಾಡುವ ತಂತ್ರಜ್ಞಾನ ನಮ್ಮಲ್ಲಿ ಮಾತ್ರವಿದೆ ಎಂದು ವೆಸ್ಟರ್ನ್ ಇಂಡಿಯಾದ ಕಂಪನಿ ಹೇಳಿಕೊಂಡಿದೆ.

ನೋಟು ಅಮಾನ್ಯವಾದ ಬಳಿಕ ಇಲ್ಲಿಯವರೆಗೆ  ಕಂಪನಿಯು ಆರ್'ಬಿಐನಿಂದ 750 ಟನ್ ನೋಟುಗಳನ್ನು ಖರೀದಿಸಿದೆ.

ಪ್ರತಿ ಒಂದು ಟನ್'ಗೆ 128 ರುಪಾಯಿಯಂತೆ ಕಂಪನಿಯು ಆರ್'ಬಿಐನಿಂದ ಖರೀದಿಸಿದೆ.

click me!