
ಬೆಂಗಳೂರು [ಸೆ.19]: ವೇತನ ಪರಿಷ್ಕರಣೆ ತಡೆಹಿಡಿದ ವಿಚಾರವಾಗಿ ಪೊಲೀಸರಿಂದ ತೀವ್ರ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ.ಎನ್.ರಾಜು ಅವರು, 3-4 ದಿನದಲ್ಲಿ ಪರಿಷ್ಕೃತ ವೇತನ ಜಾರಿಯಾಗಲಿದೆ ಎಂದು ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ.
ಸೆ.13ರಂದು ಐಪಿಎಸ್ ಅಧಿಕಾರಿ ರಾಘವೇಂದ್ರ ಎಚ್.ಔರಾದ್ಕರ್ ವರದಿಯನ್ವಯ ಪರಿಷ್ಕರಣೆ ಮಾಡಲಾಗಿದ್ದ ಪೊಲೀಸರ ವೇತನ ಜಾರಿಗೆ ಮಂಗಳವಾರ ಡಿಜಿಪಿ ತಾತ್ಕಾಲಿಕ ತಡೆ ನೀಡಿದ್ದರು. ಇದಕ್ಕೆ ಪೊಲೀಸರು ಅಸಂತೋಷಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಡಿಜಿಪಿ, ಇದೇ ತಿಂಗಳಲ್ಲಿ ಹೊಸ ವೇತನ ಸಿಗಲಿದೆ ಎಂದು ಸಿಬ್ಬಂದಿಗೆ ಭರವಸೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ವೇತನ ಪರಿಷ್ಕರಣೆ ಲೆಕ್ಕಾಚಾರವು ಸರ್ಕಾರದ ಹಂತದಲ್ಲೇ 3-4 ದಿನದೊಳಗಾಗಿ ಇತ್ಯರ್ಥವಾಗಲಿದ್ದು, ಪರಿಷ್ಕೃತ ವೇತವನ್ನು ಸೆಪ್ಟೆಂಬರ್ ತಿಂಗಳಲ್ಲೇ ಡ್ರಾ ಮಾಡಲು ಸಾಧ್ಯವಾಗುವಂತೆ ಪೊಲೀಸರಿಗೆ ನೀಡಲು ಉದ್ದೇಶಿಸಲಾಗಿದೆ. ಈ ಕುರಿತು 3-4 ದಿನಗಳಲ್ಲಿ ಪೊಲೀಸರಿಗೆ ಆಯಾ ಘಟಕಗಳ ಮುಖ್ಯಸ್ಥರು ಸಂವಹನ ನಡೆಸಲಿದ್ದಾರೆ ಎಂದು ಡಿಜಿಪಿ ಸುತ್ತೋಲೆಯಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.