
ನವದೆಹಲಿ: ಎರಡು ವರ್ಷಗಳ ಬ್ಯಾಚುಲರ್ ಆಫ್ ಎಜುಕೇಶನ್ (ಬಿಎಡ್) ಕೋರ್ಸ್ ಅನ್ನು ರದ್ದುಗೊಳಿಸಲು ಸರ್ಕಾರ ಉದ್ದೇಶಿಸಿದೆ. ಇದರ ಬದಲು 4 ವರ್ಷಗಳ ಸಮಗ್ರ ಶಿಕ್ಷಕ ತರಬೇತಿ ಯೋಜನೆಗೆ ಮಾತ್ರ ಅವಕಾಶ ಕಲ್ಪಿಸಲು ಉದ್ದೇಶಿಸಿದೆ.
ಬಿಎ-ಬಿಎಡ್ ಮತ್ತು ಬಿಎಸ್‌ಸಿ-ಬಿಎಡ್ ಕೋರ್ಸ್‌ಗಳ ಪಠ್ಯವನ್ನು ಪುನರ್ ಸಂಯೋಜಿಸಲು ಶಿಕ್ಷಕರ ಶಿಕ್ಷಣ ರಾಷ್ಟ್ರೀಯ ಮಂಡಳಿ (ಎನ್‌ಸಿಟಿಇ)ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿದೆ.
ಒಂದು ವರ್ಷ ಇದ್ದ ಬಿಎಡ್ ಕೋರ್ಸ್ ಅನ್ನು 2014ರಲ್ಲಿ 2 ವರ್ಷದ ಕೋರ್ಸ್ ಆಗಿ ಪರಿವರ್ತಿಸಲಾಗಿತ್ತು. ಆದರೆ, ಅದನ್ನು ರದ್ದುಗೊಳಿಸಿ 4 ವರ್ಷದ ಸಮಗ್ರ ಶಿಕ್ಷಕ ತರಬೇತಿ ಯೋಜನೆಯನ್ನು ಆರಂಭಿಸಲಾಗಿದೆ. ಪಿಯುಸಿ ಮುಗಿಸಿದವರು 4 ವರ್ಷದ ಬಿಎ ಬಿಎಡ್ ಅಥವಾ ಬಿಎಸ್ಸಿ ಬಿಎಡ್ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಅರ್ಹತೆ ಹೊಂದಿರುತ್ತಾರೆ. ಬಿಟೆಕ್ ಮತ್ತು ಎಂಬಿಬಿಎಸ್ ಕೋರ್ಸ್‌ಗಳ ರೀತಿಯಲ್ಲೇ ಬಿಎಡ್ ಶಿಕ್ಷಣ ನೀಡಲು ಸರ್ಕಾರ ಬಯಸಿದೆ ಎಂದು ಎನ್‌ಸಿಟಿಇ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.