
ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಹಜ್ ಯಾತ್ರಿಕರ ಸಬ್ಸಿಡಿ ಸ್ಥಗಿತಗೊಳಿಸಿದ್ದ ಬಿಜೆಪಿ, ಇದೀಗ ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತರ ಓಲೈಕೆಗೆ ಮುಂದಾಗಿದೆ. ಒಂದು ವೇಳೆ ನಾಗಾಲ್ಯಾಂಡ್‌ನಲ್ಲಿ ಅಧಿಕಾರಕ್ಕೆ ಬಂದರೆ ಕ್ರೈಸ್ತರನ್ನು ಉಚಿತವಾಗಿ ಜೆರುಸಲೆಂಗೆ ಕರೆದೊಯ್ಯುವುದಾಗಿ ತಿಳಿಸಿದೆ.
ಆದರೆ, ದೇಶದ ಎಲ್ಲಾ ಕ್ರೈಸ್ತರಿಗೆ ಈ ಆಫರ್ ನೀಡಲಾಗಿದೆಯೇ ಅಥವಾ ಈಶಾನ್ಯ ರಾಜ್ಯಗಳಿಗಷ್ಟೇ ಈ ಆಶ್ವಾಸನೆಯನ್ನು ಬಿಜೆಪಿ ನೀಡಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ಚುನಾವಣೆ ನಿಗದಿಯಾಗಿದ್ದು, ಈ ಸಮಯವನ್ನು ಬಳಸಿಕೊಂಡು ಬಿಜೆಪಿ ಕ್ರೈಸ್ತರ ಮತಗಳ ಓಲೈಕೆಗೆ ಮುಂದಾಗಿದೆ. ಮೇಘಾಲಯದಲ್ಲಿ ಶೇ.75ರಷ್ಟುಜನರು ಕ್ರೈಸ್ತರಾಗಿದ್ದಾರೆ. ಅದೇ ರೀತಿ ನಾಗಾಲ್ಯಾಂಡ್‌ನಲ್ಲಿ ಶೆ.88ರಷ್ಟುಜನರು ಕ್ರೈಸ್ತರು.
ಇದೇ ವೇಳೆ ಬಿಜೆಪಿ ಚುನಾವಣೆ ಅಗತ್ಯಕ್ಕೋಸ್ಕರ ಕ್ರೈಸ್ತರ ಜೆರುಸೆಮ್ ಪ್ರವಾಸಕ್ಕೆ ಸಬ್ಸಿಡಿ ನೀಡುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.