
ನವದೆಹಲಿ (ಏ.19): ಮಸೀದಿಗಳಲ್ಲಿ ಮುಂಜಾನೆ ಆಜಾನ್ ನೀಡುವಾಗ ಧ್ವನಿವರ್ಧಕ ಬಳಸುವ ಬಗ್ಗೆ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿರುವ ಖ್ಯಾತ ಗಾಯಕ ಸೋನು ನಿಗಂ ಮಾಧ್ಯಮದೆದುರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಆಜಾನ್ ಮುಖ್ಯ ಧ್ವನಿವರ್ಧಕವಲ್ಲ ಅದೇ ರೀತಿ ಆರತಿ ಮುಖ್ಯವೇ ಹೊರತು ಧ್ವನಿವರ್ಧಕವಲ್ಲ ಎಂದು ಹೇಳಿದ್ದಾರೆ.
ಸೋನು ನಿಗಮ್ ಹೇಳಿಕೆಯನ್ನು ಖಂಡಿಸಿ, ಇವರ ತಲೆ ಬೋಳಿಸಿದವರಿಗೆ 10 ಲಕ್ಷ ಬಹುಮಾನ ಕೊಡುವುದಾಗಿ ಮೌಲ್ವಿಯೊಬ್ಬರು ಆಫರ್ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸೋನು ನಿಗಮ್ ತಮ್ಮ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಂರಿಂದ ತಲೆ ಬೋಳಿಸಿಕೊಂಡಿದ್ದಾರೆ.
ಇಂತದ್ದೊಂದು ಸರಳ ವಿಚಾರ ಇಷ್ಟೊಂದು ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತದೆಂದು ನಿರೀಕ್ಷಿಸಿರಲಿಲ್ಲ. ತನ್ನನ್ನು ಮುಸ್ಲೀಂ ವಿರೋಧಿ ಹಣೆಪಟ್ಟಿ ಕಟ್ಟಿರುವುದಕ್ಕೆ ಪ್ರತಿಕ್ರಿಯಿಸುತ್ತಾ, ಮಹಮ್ಮದ್ ರಫಿಯನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ. ನನ್ನ ಕಾರಿನ ಡ್ರೈವರ್ ಕೂಡಾ ಮುಸ್ಲೀಂ. ನಾನು ಸಾಮಾಜಿಕ ಹಿನ್ನೆಲೆಯಲ್ಲಿ ಈ ರೀತಿ ಮಾತನಾಡಿದನೇ ಹೊರತು ಧಾರ್ಮಿಕ ಹಿನ್ನೆಲೆಯಲ್ಲಲ್ಲ. ನಾನು ಜಾತ್ಯಾತೀತನು ಎಂದು ಸೋನು ನಿಗಂ ಮಾಧ್ಯಮದೆದುರು ಹೇಳಿದ್ದಾರೆ.
ತಲೆ ಬೋಳಿಸಿಕೊಂಡಿರುವುದರ ಬಗ್ಗೆ, ಮೌಲ್ವಿಯವರ ಹೇಳಿಕೆಗೆ ನಾನು ಸವಾಲಾಗಿ ಇದನ್ನು ತೆಗೆದುಕೊಂಡಿಲ್ಲ. ಒಬ್ಬ ಮುಸ್ಲೀಂ ಕೂಡಾ ನನ್ನ ತಲೆಕೂದಲನ್ನು ಕತ್ತರಿಸಬಹುದು ಎಂದು ತೋರಿಸುವುದಕ್ಕೆ ತಲೆ ಬೋಳಿಸಿಕೊಂಡೆ. ನನ್ನ ಧರ್ಮವೇ ಶ್ರೇಷ್ಠ ಎಂದು ನಾನು ನಂಬುವುದಿಲ್ಲ.ಅದೇ ರೀತಿ ನಿಮ್ಮ ಧರ್ಮವೂ ಶ್ರೇಷ್ಠ ಎಂದು ನಂಬುವುದಿಲ್ಲ. ಧರ್ಮಾಂಧತೆಯ ವಿರುದ್ಧ ನೀವು ಹೋರಾಡಬೇಕು ಎಂದು ಸೋನು ನಿಗಂ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.