ಬಡ ವಿಧವೆಯ ಪುತ್ರನೀಗ ವೈದ್ಯ : ತಾಯಿಯ ಕನಸು ನನಸು

Published : Jun 29, 2018, 01:15 PM IST
ಬಡ ವಿಧವೆಯ ಪುತ್ರನೀಗ ವೈದ್ಯ : ತಾಯಿಯ ಕನಸು ನನಸು

ಸಾರಾಂಶ

ಬಡ ವಿಧವೆಯ ಪುತ್ರನೀಗ ತನ್ನ ತಾಯಿ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದಾನೆ. ತನ್ನ ಮಗನ ಸಾಧನೆಯನ್ನು ತಾಯಿ ಹೆಮ್ಮೆಯಿಂದ ಕೊಂಡಾಡಿದ್ದಾರೆ. 

ಜೋಧ್ ಪುರ : ಬಡ ವಿಧವೆಯ ಪುತ್ರನೀಗ ತನ್ನ ತಾಯಿ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದಾನೆ. ತನ್ನ ಮಗನ ಸಾಧನೆಯನ್ನು ತಾಯಿ ಹೆಮ್ಮೆಯಿಂದ ಕೊಂಡಾಡಿದ್ದಾರೆ. 

ಜೋಧ್ ಪುರ ಜಿಲ್ಲೆಯ   ಪಹ್ಲೋಡಿ ಪ್ರದೇಶದ ವಿಮಲಾ ದೇವಿ ಎಂಬ ಬಡ ವಿಧವೆಯ  ಪುತ್ರ ಅಶೋಕ್ ಈಗ ವೈದ್ಯರಾಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದು, 2013ರಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದ ಅವರು ಇದೀಗ ಉದಯ್ ಪುರದ ಆರ್ ಎನ್ ಟಿ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಇಂಟರ್ನ್ ಶಿಪ್ ನಡೆಸುತ್ತಿದ್ದಾರೆ. 
 
ಇವರ ತಂದೆ ಕಳೆದ 8 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅದಾದ ಬಳಿಕ ಇವರ ಕುಟುಂಬ ಸಾಕಷ್ಟು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯ್ತು. ಇಬ್ಬರು ಪುಟ್ಟ ಮಕ್ಕಳಿದ್ದ ಈ ತಾಯಿಯೇ ಕುಟುಂಬವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕಾಯ್ತು.

ದಿನಗೂಲಿಯನ್ನು ಮಾಡಿ ಮಕ್ಕಳನ್ನು  ಸಲಹಿ ವಿದ್ಯಾಭ್ಯಾಸ  ಕೊಡಿಸಿದ್ದು, ಇದೀಗ ತಾಯಿ ಹೆಮ್ಮೆ ಪಡುವಂತಹ ಸಾಧನೆಯನ್ನು ಈ ಮಕ್ಕಳು ಮಾಡಿದ್ದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

[ಚಿತ್ರ - ಹಿಂದೂಸ್ಥಾನ್ ಟೆಮ್ಸ್ ]  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ