
ನವದೆಹಲಿ(ಜೂ.29) ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಗದ್ದುಗೆ ಏರಿ ನಾಲ್ಕು ವರ್ಷ ಕಳೆದಿದೆ. ನಾಲ್ಕು ವರ್ಷದಲ್ಲಿ ಮೋದಿ ಮಾಡಿದ ವಿದೇಶ ಪ್ರವಾಸಗಳಿಗೂ ಲೆಕ್ಕವಿಲ್ಲ. ಹಾಗಾದರೆ ಮೋದಿ ವಿದೇಶ ಪ್ರವಾಸಕ್ಕೋಸ್ಕರ ಖರ್ಚು ಮಾಡಿದ ಹಣವೆಷ್ಟು? ಉತ್ತರ ಕೇಳಿದರೆ ಒಂದು ಕ್ಷಣ ದಂಗಾಗುವುದು ಖಂಡಿತ. ಮೋದಿ ಪ್ರವಾಸಕ್ಕೆ ಇಲ್ಲಿಯವರೆಗೆ ಖರ್ಚಾಗಿರುವುದು 355 ಕೋಟಿ ರೂ.!
ಹೌದು ಮೋದಿ ತಮ್ಮ 48 ತಿಂಗಳ ಅಧಿಕಾರಾವಧಿಯಲ್ಲಿ ಮೋದಿ 41 ಸಾರಿ ವಿದೇಶ ಪ್ರವಾಸ ಮಾಡಿದ್ದಾರೆ. 52 ದೇಶಗಳಿಗೆ ಭೇಟಿ ನೀಡಿದ್ದು 165 ದಿನಗಳನ್ನುವಿದೇಶದಲ್ಲೇ ಕಳೆದಿದ್ದಾರೆ.
ಟ್ರಬಲ್‌ಶೂಟರ್ ಸಿದ್ದರಾಮಯ್ಯ ಟ್ರಬಲ್‌ಮೇಕರ್ ಆಗಿದ್ದು ಯಾಕೆ?
ಬೆಂಗಳೂರು ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡದ್ ಎಂಬುವವರು ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ಹಕ್ಕು ಅನ್ವಯ ಸಲ್ಲಿಸಿದ ಅರ್ಜಿಗೆ ಈ ಮಾಹಿತಿ ಸಿಕ್ಕಿದೆ. ಫ್ರಾನ್ಸ್, ಜರ್ಮನಿ ಮತ್ತು ಕೆನಡಾಕ್ಕೆ ತೆರಳಿದ್ದ ಮೂರು ದೇಶಗಳ ಪ್ರವಾಸಕ್ಕೆ ಅತಿ ಹೆಚ್ಚಿನ ವೆಚ್ಚ ತಗುಲಿದೆ. ಈ ಪ್ರವಾಸಕ್ಕೊಂದೆ 31.25 ಕೋಟಿ ರೂ. ಖರ್ಚಾಗಿದೆ. ಭೂತಾನ್ ಪ್ರವಾಸಕ್ಕೆ 2.5 ಕೋಟಿ ರೂ. ಖರ್ಚಾಗಿದ್ದು ಇದು ಅತಿ ಮ ಕಡಿಮೆ ವೆಚ್ಚದ ಪ್ರವಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.