ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ವಿರುದ್ಧ ಅವಹೇಳನ; ದೂರು ದಾಖಲು

Published : Jun 10, 2017, 10:29 PM ISTUpdated : Apr 11, 2018, 12:47 PM IST
ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ವಿರುದ್ಧ ಅವಹೇಳನ; ದೂರು ದಾಖಲು

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಯವರ ಅವಹೇಳನಗೈದು, ಹತ್ಯೆ ಬಗ್ಗೆ ಸಂದೇಶ ಹಾಕಿದ ಚಿಕ್ಕಮಗಳೂರು ಮೂಲದ ಮಹಿಳೆ ವಿರುದ್ಧ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಚಾಲಕರು ಬೃಹನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಉಳ್ಳಾಲ (ಜೂ.10): ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಯವರ ಅವಹೇಳನಗೈದು, ಹತ್ಯೆ ಬಗ್ಗೆ ಸಂದೇಶ ಹಾಕಿದ ಚಿಕ್ಕಮಗಳೂರು ಮೂಲದ ಮಹಿಳೆ ವಿರುದ್ಧ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಚಾಲಕರು ಬೃಹನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
 
ಚಿಕ್ಕಮಗಳೂರು ಮೂಲದ, ಪ್ರಸ್ತುತ ಪುಣೆ ನಿವಾಸಿ ಸವಿತಾ ಲ್ಯಾನ್ಸಿ ಡಿ’ಸೋಜಾ ವಿರುದ್ಧ ತೊಕ್ಕೊಟ್ಟು ಕೃಷ್ಣನಗರ ನಿವಾಸಿ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಚಾಲಕ ಅಜಿತ್ ಕುಮಾರ್ ಉಳ್ಳಾಲ್ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಆಂಗ್ಲ ಪತ್ರಿಕೆಯೊಂದರಲ್ಲಿ 2023 ರ ವೇಳೆಗೆ ಭಾರತವನ್ನು ಹಿಂದೂ ದೇಶವಾಗಿ ಪರಿವರ್ತಿಸುವ ಸಂಬಂಧ ಗುಜರಾತ್‌ನಲ್ಲಿ ರೂಪರೇಷೆ ತಯಾರಾಗುತ್ತಿದೆ ಎಂದು ಪ್ರಕಟವಾದ ವರದಿಯೊಂದನ್ನು ಫೇಸ್‌ಬುಕ್‌ನ ‘ಕೊಂಕಣ್ ತಾರಾ’ ಗುಂಪಿಗೆ ಜುಡಿತ್ ಲೇವಿಸ್ ಶುಕ್ರವಾರ ಹಂಚಿಕೊಂಡಿದ್ದರು. ಗ್ರೂಪ್‌ನ ಸದಸ್ಯೆ ಸವಿತಾ ಲ್ಯಾನ್ಸಿ ಡಿ’ಸೋಜಾ ಪ್ರಧಾನಿ ನರೇಂದ್ರ ಮೋದಿ ಕುರಿತು, ‘ಮೋದಿ ಕುತ್ತೆ (ನಾಯಿ) ಎಂದು ಉಲ್ಲೇಖಿಸಿ, ಇನ್ನು ಎರಡು ವರ್ಷ ನಿಮ್ಮ ಅಧಿಕಾರ. ಅದರೊಳಗೆ ಯಾರಾದರೂ ನಿಮ್ಮನ್ನು ಬಾಂಬ್ ಸ್ಫೋಟಿಸಿ ಕೊಲ್ಲುತ್ತಾರೆ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ತನ್ನ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ಎಚ್ಚೆತ್ತ ಸವಿತಾ, ಅಜಿತ್ ಕುಮಾರ್ ಅವರ ಫೇಸ್‌ಬುಕ್ ಇನ್‌ಬಾಕ್ಸ್‌ಗೆ ಸಂದೇಶ ರವಾನಿಸಿ ಕ್ಷಮಾಪಣೆ ಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪವರ್‌ ಪಾಯಿಂಟ್‌: ದ್ವೇಷ ಭಾಷಣ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ
'ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಫೆಬ್ರವರಿ-ಮಾರ್ಚ್ ಹಣ ಯಾವಾಗ ಬರುತ್ತೆ? ಸದನಕ್ಕೆ ತಪ್ಪು ಮಾಹಿತಿ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು!