NRC ಪಟ್ಟೀಲಿ ಸಣ್ಣಪುಟ್ಟ ದೋಷ ಇದೆ: RSS ಕಳವಳ!

By Web DeskFirst Published Sep 10, 2019, 1:35 PM IST
Highlights

ಎನ್‌ಆರ್‌ಸಿ ಪಟ್ಟೀಲಿ ಸಣ್ಣಪುಟ್ಟದೋಷ ಇದೆ: ಆರ್‌ಎಸ್‌ಎಸ್‌ ಕಳವಳ| ರಾಜಸ್ತಾನದ ಪುಷ್ಕರ್‌ನಲ್ಲಿ ನಡೆಯುತ್ತಿರುವ 3 ದಿನಗಳ ವಾರ್ಷಿಕ ಸಮನ್ವಯ ಸಮಿತಿ ಸಭೆಯಲ್ಲಿ ಕೇಳಿಬಂದ ಮಾತು

ಪುಷ್ಕರ್‌[ಸೆ.10]: ಅಸ್ಸಾಂನಲ್ಲಿ ನೆಲೆಸಿರುವ ಅಕ್ರಮ ನಿವಾಸಿಗಳನ್ನು ಪತ್ತೆ ಹಚ್ಚಲು ತಯಾರಿಸಿ ಇತ್ತೀಚೆಗೆ ಬಿಡುಗಡೆ ಮಾಡಲಾದ ಅಂತಿಮ ಎನ್‌ಆರ್‌ಸಿ ಪಟ್ಟಿ ದೋಷಪೂರಿತವಾಗಿದೆ ಎಂದು ಆರ್‌ಎಸ್‌ಎಸ್‌ ಹೇಳಿದೆ.

ರಾಜಸ್ತಾನದ ಪುಷ್ಕರ್‌ನಲ್ಲಿ ನಡೆಯುತ್ತಿರುವ 3 ದಿನಗಳ ವಾರ್ಷಿಕ ಸಮನ್ವಯ ಸಮಿತಿ ಸಭೆಯಲ್ಲಿ ಸರ್ಕಾರ ತಯಾರಿಸಿದ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯದ ಭಾರತೀಯ ನಾಗರಿಕರ ಬಗ್ಗೆ ಸಂಘ ಕಳವಳ ವ್ಯಕ್ತಪಡಿಸಿದೆ. ಸರ್ಕಾರ ಪಟ್ಟಿಯನ್ನು ಅಧಿಕೃತಗೊಳಿಸುವ ಮುನ್ನ ಪರಿಶೀಲನೆಗೆ ಒಳಪಡಿಸಬೇಕು. ಪಟ್ಟಿತಯಾರಿಕೆ ವೇಳೆ ನಿಜವಾದ ಭಾರತೀಯ ನಾಗರಿಕರನ್ನೇ ಕೈಬಿಡಲಾಗಿದೆ. ಅದರಲ್ಲೂ ಹಿಂದುಗಳೇ ಹೆಚ್ಚಾಗಿದ್ದಾರೆ. ಎನ್‌ಆರ್‌ಸಿ ಪ್ರಕ್ರಿಯೆಯು ಕಠಿಣ ಮತ್ತು ಕ್ಲಿಷ್ಟಕರವಾಗಿದೆ.

ಮತಪಟ್ಟಿಯಲ್ಲಿ ಬಾಂಗ್ಲಾದೇಶದ ಅಕ್ರಮ ನಿವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಎಂದು ಆರ್‌ಎಸ್‌ಎಸ್‌ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.

click me!