(ವಿಡಿಯೋ)ದೇಶದ್ರೋಹಿಗಳು ದೇಶದೊಳಗೇ ತುಂಬಿಕೊಂಡಿದ್ದಾರೆ: ಯೋಧನೊಬ್ಬನ ಆಕ್ರೋಶದ ಮಾತು ಈಗ ವೈರಲ್

Published : Mar 01, 2017, 10:22 AM ISTUpdated : Apr 11, 2018, 01:10 PM IST
(ವಿಡಿಯೋ)ದೇಶದ್ರೋಹಿಗಳು ದೇಶದೊಳಗೇ ತುಂಬಿಕೊಂಡಿದ್ದಾರೆ: ಯೋಧನೊಬ್ಬನ ಆಕ್ರೋಶದ ಮಾತು ಈಗ ವೈರಲ್

ಸಾರಾಂಶ

ಒಂದೆಡೆ ಜೆಎನ್​ಯು ವಿವಿಯಲ್ಲಿ ದೇಶದ್ರೋಹಿ ಘೋಷಣೆ ವಿಚಾರದಲ್ಲಿ ಕನ್ಹಯ್ಯಾ ಕುಮಾರ್​ಗೆ ಕ್ಲೀನ್​ಚಿಟ್ ಅಂತೆ ಎಂಬ ವರದಿ ಕೋಲಾಹಲ ಸೃಷ್ಟಿಸುತ್ತಿರುವಾಗಲೇ, ಯೋಧನೊಬ್ಬ ಜೆಎನ್​ಯು ವಿವಿಯಲ್ಲಿ ನಡೆದ ಅಫ್ಜಲ್ ಗುರು ಶ್ರದ್ಧಾಂಜಲಿಯನ್ನು ಖಂಡಿಸಿದ ವಿಡಿಯೋವೊಂದು ವೈರಲ್ ಆಗಿದೆ.

ನವದೆಹಲಿ(ಮಾ.01): ಒಂದೆಡೆ ಜೆಎನ್​ಯು ವಿವಿಯಲ್ಲಿ ದೇಶದ್ರೋಹಿ ಘೋಷಣೆ ವಿಚಾರದಲ್ಲಿ ಕನ್ಹಯ್ಯಾ ಕುಮಾರ್​ಗೆ ಕ್ಲೀನ್​ಚಿಟ್ ಅಂತೆ ಎಂಬ ವರದಿ ಕೋಲಾಹಲ ಸೃಷ್ಟಿಸುತ್ತಿರುವಾಗಲೇ, ಯೋಧನೊಬ್ಬ ಜೆಎನ್​ಯು ವಿವಿಯಲ್ಲಿ ನಡೆದ ಅಫ್ಜಲ್ ಗುರು ಶ್ರದ್ಧಾಂಜಲಿಯನ್ನು ಖಂಡಿಸಿದ ವಿಡಿಯೋವೊಂದು ವೈರಲ್ ಆಗಿದೆ.

ಪಾಕ್ ಸೈನಿಕರು ನಮ್ಮ ದೇಶದ ಮೇಲೆ ನುಗ್ಗಿ ಬಂದಾಗ, ನಾವು ಸುಮ್ಮನಿದ್ದರೆ, ದೇಶ ಏನಾಗುತ್ತಿತ್ತು..? ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಾವು ಹೋರಾಡದೇ ಇದ್ದರೆ, ದೇಶ ಮತ್ತು ದೇಶದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿತ್ತೇ.. ಎಂದು ಯೋಧರೊಬ್ಬರು ಬಹಿರಂಗ ವೇದಿಕೆಯಲ್ಲಿ ಪ್ರಶ್ನಿಸಿದ್ದಾರೆ. ದೇಶದ ಶತ್ರುಗಳು ಉಗ್ರರಲ್ಲ, ಮಾವೋವಾದಿಗಳಲ್ಲ, ನಕ್ಸಲರೂ ಅಲ್ಲ. ನಿಜವಾದ ಆತಂಕವಾದಿಗಳು ದೇಶದೊಳಗೇ ಇದ್ದಾರೆ ಎಂದಿದ್ದಾರೆ. ಯೋಧನ ಹೆಸರು, ವಿವರ ಇನ್ನೂ ಗೊತ್ತಾಗಿಲ್ಲ. ಜೆಎನ್​ಯು ವಿವಿಯಲ್ಲಿ ಸಂಸತ್​ ದಾಳಿಯ ರೂವಾರಿ ಉಗ್ರ ಅಫ್ಜಲ್​ ಗುರುಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದರ ಬಗ್ಗೆ ಆ ಯೋಧ ಆತಂಕ ವ್ಯಕ್ತಪಡಿಸಿದ್ದಾರೆ. ಸಂವಿಧಾನದಲ್ಲಿ ಭಾರತ್ ಮಾತಾಕಿ ಜೈ ಎಂದು ಹೇಳಬೇಕು ಎಂದು ಹೇಳಿಲ್ಲ. ವಂದೇ ಮಾತರಂ ಹಾಡಿ ಎಂದೂ ಕೂಡಾ ಹೇಳಿಲ್ಲ ಎಂದು ವಾದ ಮಾಡುವವರು, ಸಂವಿಧಾನದಲ್ಲಿ ಯಾರಿಗೂ ಚಡ್ಡಿ ಹಾಕಿಕೊಂಡು ಮಾನ ಕಾಪಾಡಿಕೊಳ್ಳಿ ಎಂದು ಹೇಳಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಜೆಎನ್​ಯು ವಿವಿಯಲ್ಲಿ ಭಾರತೀಯ ಸೈನಿಕರ ವಿರುದ್ಧ, ಅಫ್ಜಲ್ ಗುರು ಪರ ಘೋಷಣೆ ಮೊಳಗಿತು ಎಂದು ಕೇಳಿದಾಗ ತಳಮಳವಾಯಿತು. ನಾವು ಯಾರಿಗಾಗಿ ಹೋರಾಡುತ್ತಿದ್ದೇವೆ ಎಂದು ಆತಂಕವಾಯಿತು ಎಂದು ಆ ಯೋಧ ಹೇಳಿದ್ಧಾರೆ. ಭಾರತದಲ್ಲಿದ್ದೀರಿ, ಭಾರತದಲ್ಲಿರುವವರೆಗೆ ಭಾರತಕ್ಕೆ ನಿಷ್ಠರಾಗಿರಿ ಎಂದು ಹೇಳಿದ್ದಾರೆ.

2016ರ ಡಿಸೆಂಬರ್​ನಲ್ಲಿ ಅಪ್​ಲೋಡ್ ಆಗಿರುವ ಈ ವಿಡಿಯೋ, ಈಗ ವೈರಲ್ ಆಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನುಸುಳುಕೋರರಿಗೆ ಅಸ್ಸಾಂ ದಾನಮಾಡಿದ್ದ ಕಾಂಗ್ರೆಸ್‌: ಮೋದಿ ಕಿಡಿ
ಕಾಶ್ಮೀರ ಉಗ್ರರಿಗೆ ಕ್ರಿಪ್ಟೋ ಹವಾಲಾ ಹಣ?