ಶಿಕ್ಷಕಿ ವಿರುದ್ಧ ವಿದ್ಯಾರ್ಥಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಆರೋಪ

Published : Mar 01, 2017, 08:29 AM ISTUpdated : Apr 11, 2018, 12:47 PM IST
ಶಿಕ್ಷಕಿ ವಿರುದ್ಧ ವಿದ್ಯಾರ್ಥಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಆರೋಪ

ಸಾರಾಂಶ

ಶಿಕ್ಷಕಿಯೇ ತನ್ನ ಅಪ್ರಾಪ್ತ ವಿದ್ಯಾರ್ಥಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡ ವಿಚಿತ್ರ ಘಟನೆ ಕಲಬುರಗಿಯಲ್ಲಿ ನಡೆದಿದೆ. ಬಿಲ್ ಕಿಸ್ ಎಂಬ 42 ವರ್ಷದ ಮಹಿಳೆಯೇ ತನ್ನ ವಿದ್ಯಾರ್ಥಿ ಬಾಲಕನ  ಜೊತೆ ಅನೈತಿಕ ಸಂಬಂಧ ಹೊಂದಿರುವ ಶಿಕ್ಷಕಿ. ಇದೀಗ ಕಳೆದ ಮೂರು ತಿಂಗಳಿಂದ ಬಾಲಕ ಕಾಣೆಯಾಗಿದ್ದು ಇದು ಈ ಶಿಕ್ಷಕಿಯೇ ಮಾಡಿರುವ ಅಪಹರಣ ಎಂದು ಬಾಲಕನ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಲಬುರಗಿ(ಮಾ.01): ಶಿಕ್ಷಕಿಯೇ ತನ್ನ ಅಪ್ರಾಪ್ತ ವಿದ್ಯಾರ್ಥಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡ ವಿಚಿತ್ರ ಘಟನೆ ಕಲಬುರಗಿಯಲ್ಲಿ ನಡೆದಿದೆ. ಬಿಲ್ ಕಿಸ್ ಎಂಬ 42 ವರ್ಷದ ಮಹಿಳೆಯೇ ತನ್ನ ವಿದ್ಯಾರ್ಥಿ ಬಾಲಕನ  ಜೊತೆ ಅನೈತಿಕ ಸಂಬಂಧ ಹೊಂದಿರುವ ಶಿಕ್ಷಕಿ. ಇದೀಗ ಕಳೆದ ಮೂರು ತಿಂಗಳಿಂದ ಬಾಲಕ ಕಾಣೆಯಾಗಿದ್ದು ಇದು ಈ ಶಿಕ್ಷಕಿಯೇ ಮಾಡಿರುವ ಅಪಹರಣ ಎಂದು ಬಾಲಕನ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಲಬುರಗಿ ನಗರದ ಶೇಖ ರೋಜಾ ಬಡಾವಣೆಯ ಕೂಲಿಕಾರನ ಮಗ 17 ವರ್ಷದ ಮೊಹ್ಮದ ಹಫೀಜ್ ಎಂಬಾತನೇ ಅಪಹರಣಕ್ಕೊಳಗಾದ ವಿದ್ಯಾರ್ಥಿ. ಈ ವಿದ್ಯಾರ್ಥಿ 8 ನೇ ತರಗತಿಯಲ್ಲಿರುವಾಗಲೇ ಜಿನಿಯಸ್ ಶಾಲೆಯ ಶಿಕ್ಷಕಿ ಗಿಲ್ ಕಿಸ್ ಟ್ಯೂಶನ್ ಹೇಳುವ ನೆಪದಲ್ಲಿ ಈ ಬಾಲಕನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ವಿವಾಹಿತಳಾಗಿರುವ ಶಿಕ್ಷಿಕಿಗೆ ಎರಡು ಮಕ್ಕಳಿದ್ದಾರೆ. ಗಂಡನಿಂದ ದೂರ ಇರುವ ಈ ಶಿಕ್ಷಕಿಯ ಕಾಮದಾಟದ ವಿಚಾರ ಶಾಲಾ ಮುಖ್ಯಸ್ಥರಿಗೂ ಗೊತ್ತಾದಾಗ ಶಾಲೆಯಿಂದ ಕಿತ್ತು ಹಾಕಿದ್ದಾರೆ. ಆದರೂ ಈ ಬಾಲಕನೊಂದಿಗೆ ಸಂಪರ್ಕ ಮಾತ್ರ ಬಿಟ್ಟಿರಲಿಲ್ಲ.

ಇದೀಗ ಮೂರು ತಿಂಗಳಿಂದ ನಾಪತ್ತೆಯಾಗಿರುವ ಬಾಲಕನನ್ನು ಈಕೆಯೇ ಕಿಡ್ನಾಪ್ ಮಾಡಿದ್ದು ನನ್ನ ಮಗನನ್ನು ನನಗೆ ಮರಳಿ ಕೊಡಿಸಿ ಎಂದು ಪಾಲಕರು ಕಣ್ಣೀರು ಸುರಿಸುತ್ತಿದ್ದಾರೆ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೀರಿಯಲ್‌ ನಟಿ ಅ*ತ್ಯಾಚಾರ ಮಾಡಿ ಬೆದರಿಸಿ ಮದುವೆ, ಈಗ ನಡುರಸ್ತೆಯಲ್ಲಿಯೇ ಅತ್ತೆ-ಮಾವನ ಮೇಲೆ ಹಲ್ಲೆ!
2 ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿಗೆ ಹೋಯ್ತು?, ವಿಪಕ್ಷಗಳ ಆಕ್ರೋಶಕ್ಕೆ ಹೆಬ್ಬಾಳ್ಕರ್ ಭಾವುಕ, ನಾನು ಮಹಿಳೆ ಎಂಬ ಕಾರಣಕ್ಕೆ ಹೀಗೆ ಮಾಡ್ತೀರಾ ಎಂದ ಸಚಿವೆ