ಕೇರಳದಲ್ಲಿ ಹಿಮಪಾತ ಆಯ್ತಂತೆ!

Published : May 06, 2017, 07:00 PM ISTUpdated : Apr 11, 2018, 01:00 PM IST
ಕೇರಳದಲ್ಲಿ ಹಿಮಪಾತ ಆಯ್ತಂತೆ!

ಸಾರಾಂಶ

ಕೇರಳದ ವೈನಾಡು ಜಿಲ್ಲೆಯಲ್ಲಿ ಅಪರೂಪದ ಆಲಿಕಲ್ಲು ಮಳೆಯಾಗಿದ್ದು, ರಸ್ತೆಗಳೆಲ್ಲಾ ಬಿಳಿಯ ಚಾದರ ಹೊದ್ದಂತೆ ಕಾಣುತ್ತಿದ್ದವು. ಈ ರೀತಿಯ ವಿದ್ಯಮಾನ ಹಿಂದೆಂದೂ ಆಗಿರಲಿಲ್ಲವಂತೆ. ಹೀಗಾಗಿ ಜನರೆಲ್ಲಾ ಹಿಮಪಾತವಾಗಿದೆ ಎಂದೇ ಭಾವಿಸಿದ್ದರು. ಆದರೆ, ಹಿರಿಯರು ಹೇಳುವ ಪ್ರಕಾರ, ಕೇರಳದಲ್ಲಿ ಈ ರೀತಿಯ ಆಲಿಕಲ್ಲು ಮಳೆಗಳು ಹೊಸದೇನೂ ಅಲ್ಲ.

ಮೈ ಸುಡುವಷ್ಟು ಬಿಸಿಲು ಇರುವ ಕೇರಳದಲ್ಲಿ ಎಂದಾದರೂ ಹಿಮಪಾತವಾದ ಸುದ್ದಿ ಕೇಳಿದ್ದೀರಾ? ಆದರೆ, ಇತ್ತೀಚೆಗೆ ಕೇರಳದ ರಸ್ತೆಗಳೆಲ್ಲಾ ಹಿಮದಿಂದ ಆವೃತ್ತವಾಗಿದ್ದವು. ನೆಲದ ಮೇಲೆಲ್ಲಾ ಹಿಮಗಳು ಬಿದ್ದಿರುವ ೆಟೋಗಳು ಸಾಮಾಜಿಕ ಜಾಲತಾಣಗಳಾದ  ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಹರಿದಾಡುತ್ತಿವೆ.

ಕೇರಳದ ವೈನಾಡು ಜಿಲ್ಲೆಯಲ್ಲಿ ಅಪರೂಪದ ಆಲಿಕಲ್ಲು ಮಳೆಯಾಗಿದ್ದು, ರಸ್ತೆಗಳೆಲ್ಲಾ ಬಿಳಿಯ ಚಾದರ ಹೊದ್ದಂತೆ ಕಾಣುತ್ತಿದ್ದವು. ಈ ರೀತಿಯ ವಿದ್ಯಮಾನ ಹಿಂದೆಂದೂ ಆಗಿರಲಿಲ್ಲವಂತೆ. ಹೀಗಾಗಿ ಜನರೆಲ್ಲಾ ಹಿಮಪಾತವಾಗಿದೆ ಎಂದೇ ಭಾವಿಸಿದ್ದರು. ಆದರೆ, ಹಿರಿಯರು ಹೇಳುವ ಪ್ರಕಾರ, ಕೇರಳದಲ್ಲಿ ಈ ರೀತಿಯ ಆಲಿಕಲ್ಲು ಮಳೆಗಳು ಹೊಸದೇನೂ ಅಲ್ಲ.

1990ರ ಮಧ್ಯಂತರದ ಅವಧಿಯವರೆಗೂ ಕೇರಳದಲ್ಲಿ ಭಾರೀ ಪ್ರಮಾಣದ ಆಲಿಕಲ್ಲು ಮಳೆ ಆಗುತ್ತಿದ್ದವಂತೆ. ಆ ಬಳಿಕ ಈ ರೀತಿಯ ಮಳೆ ತೀರಾ ಅಪರೂಪವಾಗಿವೆಯಂತೆ. ಹೀಗಾಗಿ ಜನರೆಲ್ಲಾ ಕೇರಳದಲ್ಲಿ ಜರುಗಿದ ವಿದ್ಯಮಾನವನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರಂತೆ. ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಚಿತ್ರಗಳನ್ನು ಕಂಡು ಕೇರಳದಲ್ಲಿ ಹಿಮಪಾತವೇ ಆಗಿದೆ ಎಂದೇ ಎಲ್ಲರೂ ಭಾವಿಸಿಕೊಂಡಿದ್ದಾರೆ. ಆದರೆ, ಅಲ್ಲಿ ಆಗಿದ್ದು ಆಲಿಕಲ್ಲು ಮಳೆಯಷ್ಟೇ. ದೊಡ್ಡ ಗಾತ್ರದ ಆಲಿಕಲ್ಲುಗಳು ಗಂಟೆಗೂ ಹೆಚ್ಚು ಹೊತ್ತು ಕರಗದೇ ಹಾಗೇಯೇ ಇದ್ದವು. ಇದರಿಂದ ಬೆಳೆಗಳಿಗೆ ಹಾನಿ ಸಂಭವಿಸಿದೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ