
ಬೆಂಗಳೂರು (ಜು.08): ಆರ್’ಎಸ್ಎಸ್ ಕಾರ್ಯಕರ್ತ ಶರತ್ ಹತ್ಯೆ ಇಡೀ ರಾಜ್ಯವನ್ನೇ ಸಂಚಲನಗೊಳಿಸಿದೆ. ಇಂದು ನಡೆದ ಅವರ ಅಂತ್ಯ ಸಂಸ್ಕಾರದ ವೇಳೆ ಗಲಾಟೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಸುವ್ಯವಸ್ಥೆಯ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನೆ ಕೇಳಲಾಯಿತು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡುವಂತ, ಕಾನೂನನ್ನು ಉಲ್ಲಂಘಿಸುವ ಯಾರೇ ಆಗಲಿ ಹಿಂದೂಗಳಾಗಲಿ ಅಥವಾ.......... ಎಂದು 8-10 ಸೆಕೆಂಡ್ ಏನು ಹೇಳಬೇಕೆಂದು ತೋಚದೇ ತಡವರಿಸಿದರು. ಆಗ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ನೆರವಿಗೆ ಧಾವಿಸಿ ಬೇರೆ ಧರ್ಮದವರು ಎಂದು ಹೇಳಿಕೊಟ್ಟರು. ಬೇರೆ ಯಾವುದೇ ಧರ್ಮದವರಾದರೂ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಕೂಡಾ ಮಾತನಾಡಿದ್ದೇನೆ ಎಂದು ಹೇಳಿ ಹೊರಟು ಬಿಟ್ಟರು.
ರಾಜ್ಯದ ಮುಖ್ಯಮಂತ್ರಿಯವರು ಒಂದು ಧರ್ಮದ ಸಿಎಂ ಅಲ್ಲ. ಎಲ್ಲಾ ಧರ್ಮದವರ ಪ್ರತಿನಿಧಿಯಾಗಿ ಯಾಕೆ ಒಂದೇ ಧರ್ಮದ ಹೆಸರನ್ನು ಹೇಳಿ ಇನ್ನೊಂದು ಧರ್ಮದ ಹೆಸರನ್ನು ಹೇಳದೇ ಓಲೈಕೆ ಮಾಡುತ್ತಿದ್ದಾರಾ..? ಸಾವಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರಾ? ಇಬ್ಬಂದಿತನದ ನೀತಿ ಯಾಕೆ? ಎಂಬ ಪ್ರಶ್ನೆಯನ್ನು ಹುಟ್ಟಿ ಹಾಕಿದೆ. ಮುಖ್ಯಮಂತ್ರಿಯವರ ಈ ಮಾತುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.